ವಿಜಯ ಸಂಘರ್ಷ
ಹನೂರು: ಅನಂತ ಹುಣ್ಣಿಮೆ ಅಂಗವಾಗಿ ಹಾರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟ ದೇವಾಲಯ ಹಾಗೂ ಸಾಲೂರು ಬೃಹನ್ಮಠಕ್ಕೆ ಸೋಮವಾರ ಬೇಟಿ ನೀಡಿದರು.
ಹೆಲಿಕ್ಯಾಪ್ಟರ್ ಮೂಲಕ ಹೆಲಿಪ್ಯಾಡ್‍ಗೆ ಬಂದಿಳಿದ ಗುರೂಜಿ ಅವರನ್ನು ಮಲೆಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠ ಪೀಠಾಧೀಪತಿ ಶಾಂತಮಲ್ಲಿಕಾರ್ಜುನಸ್ವಾಮಿ ಹಾಗೂ
ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಉಪ ಕಾರ್ಯದರ್ಶಿ ಬಸವರಾಜು ಅವರು ಸ್ವಾಗತಿಸಿದರು.
ನಂತರ ಮಾದಪ್ಪನ ದೇಗುಲಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದ ಅವರು ಪ್ರಾಧಿಕಾರದ ಅಭಿವೃದ್ಧಿ
ಕಾರ್ಯಗಳು ಹಾಗೂ ವಿಶೇಷತೆಗಳ ಬಗ್ಗೆ ಜಯವಿಭವಸ್ವಾಮಿ ಅವರಿಂದ ಮಾಹಿತಿ ಪಡೆದರು.
ಬಳಿಕ ಸಾಲೂರು ಬೃಹನ್ಮಠಕ್ಕೆ ತೆರಳಿ ಮಹದೇಶ್ವರ
ಸ್ವಾಮಿಯ ಮೂಲ ಗದ್ದುಗೆಗೆ ಪೂಜೆ ಸಲ್ಲಿಸಿದರು. ಹಿರಿಯ ಗುರುಸ್ವಾಮಿ ರವರನ್ನು ಬೇಟಿಯಾಗಿ ಯೋಗ ಕ್ಷೇಮದ ಬಗ್ಗೆ ವಿಚಾರಿಸಿ
ಗುರುಸ್ವಾಮಿ ಯವರನ್ನು ರವಿಶಂಕರ್ ಗುರೂಜಿ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಿದರು.
ಇದೇ ವೇಳೆ ಮಠದ ವತಿಯಿಂದಲೂ ಗುರೂಜಿ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು. ಮಠದ ಮಕ್ಕಳ ಸಂಸ್ಕತ ಪಾಠಶಾಲೆಗೆ ಧಾವಿಸಿ ಪಾಠಪ್ರವಚನಗಳ ಬಗ್ಗೆ ಮಾಹಿತಿ ಪಡೆದರು.
ನಂತರ ದೀಪದ ಒಡ್ಡುವಿನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮಹದೇಶ್ವರ ಸ್ವಾಮಿಯ108 ಅಡಿ ಹುಲಿವಾಹನರೂಢ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಬೇಟಿ ಕಾಮಗಾರಿಯನ್ನು ವೀಕ್ಷಿಸಿ ಹೆಲಿಕ್ಯಾಪ್ಟರ್ ಮೂಲಕಹಿಂತಿರುಗಿದರು.
ಈ ಸಂದರ್ಭದಲ್ಲಿ ಸಾಲೂರು ಬೃಹನ್ಮಠದ ಪೀಠಾಧೀಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಸಾಲೂರು ಬೃಹನ್ಮಠದ ಪೀಠಾಧ್ಯಕ್ಷ ಉಪ ಕಾರ್ಯದರ್ಶಿ ಬಸವರಾಜು, ಇದ್ದರು.
ವರದಿ: ಪ್ರಭುಸ್ವಾಮಿ ಎಂ, ಹನೂರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795