ಅತ್ಯಾಚಾರಿಗಳಿಗೆ ಕಠಿಣ ಕಾನೂನು ಜಾರಿಗೊಳಿಸಿ: ಶಶಿಕುಮಾರ್ ಎಸ್ ಗೌಡ ಒತ್ತಾಯ

 

ವಿಜಯ ಸಂಘರ್ಷ



ಭದ್ರಾವತಿ : ಪ್ರತಿನಿತ್ಯ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಅತ್ಯಾಚಾರ, ದೌರ್ಜನ್ಯಗಳ  ಕುರಿತಾದ
ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದರಿಂದ
ಪೋಷಕರು ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಆತಂಕ ವ್ಯಕ್ತಪಡಿಸಿದರು.

ಸೋಮವಾರ ಮಿನಿವಿಧಾನ ಸೌಧ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಪೊಲೀಸರು ಮಹಿಳೆಯರ ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದ   ತಕ್ಷಣ ತಪ್ಪಿತಸ್ತರನ್ನು ಬಂಧಿಸುವ ಕೆಲಸವನ್ನು ಮಾಡುತ್ತಿರುವುದು ಸಂತಸದ ವಿಚಾರ.

ಮುಖ್ಯಮಂತ್ರಿಗಳು ಕಾನೂನು ತಜ್ಞರ ಜೊತೆ ಚರ್ಚಿಸಿ ತಪ್ಪಿತಸ್ಥರು  ಜೀವಮಾನವಿಡಿ ಜೈಲಿನ ಕತ್ತಲೆ ಕೋಣೆಯಲ್ಲಿ ಕೊಳೆಯುವಂತೆ ಹಾಗೂ ಗಲ್ಲು ಶಿಕ್ಷೆಗಳನ್ನು ಜಾರಿಗೊಳಿಸು ವಂತಾಗಬೇಕೆಂದು ಆಗ್ರಹಿಸಿದರು.

ಇಂತಹ ಕಠಿಣ ಕಾನೂನುಗಳು ಬಂದಾಗ ಮಾತ್ರ ಮಹಿಳೆಯರು, ವಿದ್ಯಾರ್ಥಿನಿ ಯರು, ಬಾಲಕಿಯರು, ಅಪ್ರಾಪ್ತರು ಹಾಗೂ ರಾಜ್ಯದ ನಾಗರಿಕರು ನೆಮ್ಮದಿ ಯಿಂದ ಜೀವನ ಸಾಗಿಸುವಂತಾಗುತ್ತದೆ.  ಪೋಲೀಸರು ದೇಶದ್ರೋಹಿ ಹಾಗೂ ದೇಶಕ್ಕೆ ತೊಂದರೆ ಕೊಡುವಂತಹ ಸಂಚುಕೋರರನ್ನು ಬಂಧಿಸಿದಾಗ ಅಥವಾ ಗುಂಡಿಕ್ಕಿ ಕೊಂದಾಗ ಅಂತವರ  ಪರ ಮಾತನಾಡುವ ಮಾನವ ಹಕ್ಕುಗ ಳು ಅತ್ಯಾಚಾರಗಳು ಲೈಂಗಿಕ ಅಪ್ರಾಪ್ತ ಬಾಲಕಿಯರ ನೆರವಿಗೆ ಬಾರದಿರುವು ದೇಕೆ ಎಂದು ಪ್ರಶ್ನಿಸಿಸಿದರು.

ಆದ್ದರಿಂದ ಮುಖ್ಯಮಂತ್ರಿಗಳು ಸಂಬಂಧಿತ ಕಾನೂನು ತಜ್ಞರೊಡನೆ ಚರ್ಚಿಸಿ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ರವರ ಮೂಲಕ ಮನವಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು