ವಿಜಯ ಸಂಘರ್ಷ
ಶಿಕಾರಿಪುರ : ಐದು ವರ್ಷದ ಮಗುವಿನ ಮೇಲಿನ ನಡೆದ ಅತ್ಯಾಚಾರ ಹತ್ಯೆ ಖಂಡಿಸಿ ಮಹಿಳೆಯರ ರಕ್ಷಣೆಗೆ ರಾಷ್ಟ್ರಪತಿಗಳು ವಿಶೇಷ ಕಾನೂನು ಜಾರಿ ಮಾಡುವಂತೆ ಆಗ್ರಹಿಸಿ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ, ಕೇಂದ್ರ ರಾಜ್ಯ ಸರಕಾರ ಮಹಿಳೆಯರ ರಕ್ಷಣೆ ಮಾಡುವುದರಲ್ಲಿ ವಿಫಲ ಆಗಿದೆ. ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಹಿಳೆಯರ ಮತ್ತು ಅಪ್ರಾಪ್ತ ಮಕ್ಕಳ ಮೇಲೆ ಕೂಡ ದೌರ್ಜನ್ಯ ಅಮಾನುವೀಯ ಅತ್ಯಾಚಾರ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು ತಡೆಯುವಲ್ಲಿ ಬಹಳ ಕಠಿಣಗಲ್ಲಿಗೇರಿಸುವ ಶಿಕ್ಷೆ ಕಾನೂನಿನಲ್ಲಿ ಮಾರ್ಪಡು ಮಾಡಲು ರಾಷ್ಟ್ರಪತಿಗಳು ಅನುಮೋದನೆ ಮಾಡಬೇಕೆಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ನಾಯ್ಕ್ ಮಾತನಾಡಿ ಹೆಣ್ಣುಮಕ್ಕಳ ಮೇಲೆ ಪದೇ ಪದೇ ಸರಣಿ ಅತ್ಯಾಚಾರ ಹತ್ಯೆ ಪ್ರಕರಣಗಳು ನಡೆಯುತ್ತಿದ್ದರು, ಪ್ರಧಾನಿ ಮೌನ ವಹಿಸಿದ್ದು, ಕಠಿಣ ಶಿಕ್ಷೆಯ ಕಾನೂನು ರೂಪಿಸಲು ವಿಫಲ ಆಗಿದ್ದಾರೆ. ಮಹಿಳೆಯರ ರಕ್ಷಣೆಗೆ ಸರಕಾರ ಕ್ರಮ ತೆಗೆದುಕ್ಕೊಳದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಕಾಡ ಅಧ್ಯಕ್ಷ ನಗರದ ಮಹದೇವಪ್ಪ , ಪುರಸಭಾ ಸದಸ್ಯ ಹುಲ್ಮಾರ್ ಮಹೇಶ್, ಬಂಡಾರಿ ಮಾಲತೇಶ್ , ರಾಘವೇಂದ್ರ ನಾಯ್ಕ್ , ಗೋಣಿ ಸಂದೀಪ್, ವಕೀಲ ನಿಂಗಪ್ಪ , ಶಿವು ಹುಲ್ಮಾರ್ , ಬುಡೆನ್ ಸಾಬ್ ಮತ್ತಿತರರಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795