ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಿ: ವಿದ್ಯಾರ್ಥಿ ಕಾಂಗ್ರೆಸ್ ಆಗ್ರಹ

 

ವಿಜಯ ಸಂಘರ್ಷ



ಶಿವಮೊಗ್ಗ : ಶಾಲಾ ಕಾಲೇಜು  ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಬಸ್ ಪಾಸ್ ವಿತರಿಸುವಂತೆ ಆಗ್ರಹಿಸಿ ಕಾಂಗ್ರೆಸಿನ ವಿದ್ಯಾರ್ಥಿ ಘಟಕ (ಎನ್ಎಸ್ ಯುಐ)ಒತ್ತಾಯಿಸಿ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಕೆಲ ತಿಂಗಳು ಶಾಲಾ ಕಾಲೇಜುಗಳಲ್ಲಿ  ತರಗತಿಗಳು ನಡೆದಿರಲಿಲ್ಲ, ಆನ್ ಲೈನ್ ತರಗತಿಗಳುನಲ್ಲಿ ನಡೆದು ಬಸ್ ಪಾಸ್ ಗೆಂದು ಪಾವತಿಸಿದ್ದ ಹಣ ವ್ಯರ್ಥ ವಾಗಿ ದೆ.ಈ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಬಸ್ ಪಾಸ್ ವಿತರಣೆ ಮಾಡದೆ ಇರುವು ದರಿಂದ ಕಳೆದ ಸಾಲಿನ ಪಾಸ್ ಅವಧಿ ವಿಸ್ತರಿಸಬೇಕೆಂದು ಆಗ್ರಹಿಸಿದರು.

2021-21ನೇ ಸಾಲಿನಲ್ಲಿ ವಿದ್ಯಾರ್ಥಿ ಗಳಿಗೆ ನೀಡಲಾಗಿದ್ದ ಬಸ್ ಪಾಸ್ ಅವಧಿಯು ಆಗಸ್ಟ್ ತಿಂಗಳಾಂತ್ಯಕ್ಕೆ ಮುಕ್ತಾಯಗೊಂಡಿರುತ್ತದೆ .
ಅವಧಿ ಮುಗಿದಿರುವುದರಿಂದ ವಿದ್ಯಾರ್ಥಿಗಳಿಗೆ ಹೊಸ ಬಸ್ ಪಾಸ್ ತರುವಂತೆ ಒತ್ತಾಯ ಮಾಡಲಾಗು ತ್ತಿದೆ .ಹಿಂದಿನ ಸಾಲಿನ ಬಸ್ ಪಾಸ್ ಅನ್ನು ಪರಿಗಣಿಸುತ್ತಿಲ್ಲವಾದ್ದರಿಂದ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ .
ಕರೋನಾ ಸಂದರ್ಭದಲ್ಲಿ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿರುವುದ ರಿಂದ  ವಿದ್ಯಾರ್ಥಿಗಳಿಗೆ ಪಾಸ್ ಪಡೆಯುವುದು ಕಷ್ಟವಾಗಲಿದೆ .ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ಬಸ್ ಪಾಸ್ ಅನ್ನೇ 2021-22ನೇ ಸಾಲಿಗೂ ವಿಸ್ತರಣೆ ಮಾಡಬೇಕು .ವಿದ್ಯಾರ್ಥಿಗಳಿಗೆ ಆಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕೆ.ಚೇತನ್, ಮುಖಂಡರಾದ ಸಿ.ಜಿ.ಮಧುಸೂದನ್  ಬಾಲಾಜಿ, ಮಹಮ್ಮದ್ ನಿಹಾಲ್,ರವಿ, ಗಿರೀಶ್ ,ರವಿ ,ಅಬ್ದುಲ್ ,ಮಂಜು ಪುರಲೆ , ಆಲ್ವಿನ್ , ನರೇಂದ್ರ, ಆಕಾಶ್, ಕಿರಣ್ ,ಸಂಜಯ್ ,ವೆಂಕಟೇಶ್,ನಿಖಿಲ್ ,ಅಭಿಷೇಕ್ ,ಉಪೇಂದ್ರಇನ್ನಿತರರು  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು