"ಮಾತೆ ಸಾವಿತ್ರಿಬಾಯಿ ಪುಲೆ" ಪ್ರಶಸ್ತಿ ಮುಡಿಗೇರಿಸಿ ಕೊಂಡ ಶ್ರೀಕಾಂತ ರಾಮ ಪಾಟಗಾರ

 

ವಿಜಯ ಸಂಘರ್ಷ



ತೀರ್ಥಹಳ್ಳಿ: ರಾಜ್ಯ ಸರ್ಕಾರದಿಂದ 2021-22 ನೇ ಸಾಲಿನ ಅತ್ಯುತ್ತಮ ಶಿಕ್ಷಕ ಮತ್ತು ಶಿಕ್ಷಕಿಯರ ಪ್ರಶಸ್ತಿ ಪ್ರಕಟವಾಗಿದ್ದು 2021-22 ನೇ ಸಾಲಿನ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ  "ಮಾತೆ ಸಾವಿತ್ರಿಬಾಯಿ ಪುಲೆ "  ಪ್ರಶಸ್ತಿಗೆ ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ ಕೊಣಂದೂರಿನ ಶ್ರೀಕಾಂತ ರಾಮ ಪಾಟಗಾರ ಆಯ್ಕೆಯಾಗಿದ್ದರೆ

ಶ್ರೀ ರಾಮ ಪಟಗಾರ ಮತ್ತು  ಮಹಾದೇವಿ ಇವರ ಪುತ್ರನಾದ ಶ್ರೀಕಾಂತ್ ಕುಮಟಾ ಇವರು ಹುಟ್ಟಿದ್ದು  ಉತ್ತರ ಕನ್ನಡ  ಜಿಲ್ಲೆಯ ಕುಮಟಾ ತಾಲ್ಲೂಕಿನ ಸಂಡಳ್ಳಿಯ ಪುಟ್ಟ ಹಳ್ಳಿಯಲ್ಲಿ.  ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪಾಥಮಿಕ ಶಾಲೆ ಚಿತ್ರಿಗಿಯಲ್ಲಿ,  ಪ್ರೌಢ ಶಿಕ್ಷಣವನ್ನು ಮಹಾತ್ಮ ಗಾಂಧೀ ಹೈಸ್ಕೂಲ್ ಚಿತ್ರಿಗಿ ಮತ್ತು ಪದವಿ ಶಿಕ್ಷಣವನ್ನು ಡಾ.ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯ ಕುಮಟಾ ತಾಲೂಕಿನಲ್ಲಿ ಪೂರೈಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಜಾಗತಿಕ ಮಟ್ಟದಲ್ಲಿ ಪ್ರಖ್ಯಾತವಾಗಿರುವ ಪ್ರತಿಷ್ಠಿತ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ “ ರಂಗಕಲೆಯ ಡಿಪ್ಲೋಮೊ” ಪದವಿಯನ್ನು ಪಡೆದು,  ನಂತರ ಕುವೆಂಪು ವಿಶ್ವವಿದ್ಯಾಲಯದಿಂದ ರಂಗ ಮಾಧ್ಯಮ ಪಿ ಜಿ. ಡಿಪ್ಲೋಮೊ” ಪದವಿಯನ್ನು ಪಡೆದು, ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದಲ್ಲಿ ನಾಟಕದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ.

2004-05 ರಲ್ಲಿ ನೀನಾಸಮ್ ರಂಗ ಶಿಕ್ಷಣ ಕೇಂದ್ರದಲ್ಲಿ ಪದವಿ ಮುಗಿಸಿ  “ನೀನಾಸಂ ತಿರುಗಾಟ”, ಶಿವ ಸಂಚಾರ ತಿರುಗಾಟ, “ ಜನಮನದಾಟ” ತಿರುಗಾಟ, ನಟನ ಮೈಸೂರು“, ಬೆಂಗಳೂರು ಗಳಂತಹ ಹಲವಾರು ಪ್ರತಿಷ್ಠಿತ ರಂಗ  ತಂಡಗಳಲ್ಲಿ ಅಭಿನಯ, ಬೆಳಕಿನ ವಿನ್ಯಾಸ, ತಾಂತ್ರಿಕ ವಿಭಾಗ, ಬರವಣಿಗೆ, ಮಕ್ಕಳ ಶಿಬಿರ, ರಂಗ ಶಿಬಿರ ಹೀಗೆ ನಾಟಕಕ್ಕೆ ಬೇಕಾದ ಪೂರಕ ಹಿನ್ನೆಲೆಯಲ್ಲಿ ಕೆಲಸ ಮಾಡಿ ಅನುಭವ ಇರುವ ಇವರು ಸರ್ಕಾರಿ ಪ್ರೌಢಶಾಲೆ ಕೋಣಂದೂರು, ತೀರ್ಥಹಳ್ಳಿ  ಇಲ್ಲಿ ವಿಶೇಷ ಶಿಕ್ಷಕರ (ನಾಟಕ) ಹುದ್ದೆಗೆ ದಿನಾಂಕ13-01-2009 ರಂದು ಸೇವೆಗೆ ಸೇರಿಕೊಳ್ಳುತ್ತಾರೆ. ಅಲ್ಲಿಂದ ಇಲ್ಲಿಯ ವರೆವಗೂ ಅತ್ಯಂತ ಮಾದರಿಯಾಗು ವಂತಹ ಸಾಧನೆಗಳನ್ನು ಮಾಡುತ್ತಾ ಬಂದಿರುತ್ತಾರೆ.

ಇಲಾಖೆಯು ವಿವಿಧ ಹಂತಗಳಲ್ಲಿ ಆಯೋಜಿಸುವ ಪ್ರತಿಭಾ ಕಾರಂಜಿ, ವಿಜ್ಞಾನ ನಾಟಕ, ಕಲೋತ್ಸವ, ರಾಷ್ಟ್ರೀಯ ಪಾತ್ರಾಭಿನಯ, ರಾಷ್ಟ್ರೀಯ ಜನಪದ ನೃತ್ಯಗಳಂತಹ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಖಾಸಗೀ ಶಾಲೆಗಳು ತಾಂತ್ರಿಕವಾಗಿ ಅತ್ಯಂತ ಗುಣ ಮಟ್ಟದ ಉಪಕರಣಗಳನ್ನು ಬಳಸಿ ಪ್ರಭಾವ ಬೀರಿ ಗೆಲ್ಲುತ್ತವೆ. ಅಂತಹ ಶಾಲೆಗಳ ಅಬ್ಬರದ ನಡುವೆಯೂ ಸತತವಾಗಿ ರಾಜ್ಯ ಮಟ್ಟದ ವರೆಗೆ ಅತ್ಯುತ್ತಮ ಪ್ರದರ್ಶನಗಳನ್ನು ನೀಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸರ್ಕಾರ ಆಯೋಜಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ  ಪ್ರತಿನಿಧಿಸಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆಯನ್ನು ಮತ್ತು ಶಾಲೆಯ ಹೆಸರನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿ  ಶಾಲೆ ಮತ್ತು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ  ಉತ್ತಮ ನಾಟಕಕಾರ ಹಾಗೂ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದು ಶಾಲೆಗೆ ಗೌರವ ತಂದಿರುತ್ತಾರೆ.
ರಾಜ್ಯದ ನಾನಾ ಚಿಂತಕರ, ಪ್ರಗತಿಪರರ, ಸಾಹಿತಿಗಳ, ಅಧಿಕಾರಿಗಳ ಗಮನ ಸೆಳೆದು ಸರ್ಕಾರಿ ಶಾಲೆಗಳ ಜನಪ್ರಿಯತೆ, ಗೌರವ ಮತ್ತು ದಾಖಲಾತಿ ಹೆಚ್ಚಾಗಲು ನಾಟಕ ಕಲೆಯ ಮೂಲಕ ಪ್ರಮುಖ  ಪಾತ್ರವಹಿಸಿರುತ್ತಾರೆ.

ರಾಜ್ಯದ ಹಲವಾರು ಬಿ.ಇಡಿ. ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ ಶಿಕ್ಷಣದಲ್ಲಿ ರಂಗ ಕಲೆ ವಿಷಯವನ್ನು ಬೋಧಿಸಿ ಅವರಲ್ಲಿ ರಂಗಕಲೆಯ ಮೂಲಕ ಮಕ್ಕಳಿಗೆ ಪಾಠ ಮಾಡುವ ತಂತ್ರದ ಅರಿವನ್ನು ಮೂಡಿಸಿ ರುತ್ತರೆ. ಅಲ್ಲದೆ ವಿಶ್ವ ವಿದ್ಯಾಲಯಗಳ ಮಟ್ಟದಲ್ಲಿಯೂ ರಂಗ ಶಿಬಿರ ತರಬೇತಿ ಶಿಬಿರ ನಡೆಸಿ ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿ ಮೂಡಿಸಿರುತ್ತಾರೆ.

"ರಾಷ್ಟ್ರೀಯ ನಾಟಕೋತ್ಸವ” ಕ್ಕೆ ಸರ್ಕಾರಿ ಪ್ರೌಢಶಾಲೆ ಆಯ್ಕೆಯ ಹೆಗ್ಗಳಿಕೆ:

ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ವತಿಯಿಂದ ನಡೆಯುವ “ರಾಷ್ಟ್ರೀಯ ನಾಟಕೋತ್ಸವ” ದಲ್ಲಿ ಭಾರತದ ಪ್ರತಿಷ್ಠಿತ ರಂಗ ತಂಡಗಳಿಗೆ ಮಾತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರಲಾಗುತ್ತದೆ ಅಂತಹ ಉತ್ಸವದಲ್ಲಿ ಸರ್ಕಾರಿ ಪ್ರೌಢಶಾಲೆ, ಕೋಣಂದೂರು ಶಾಲೆಯ  ವಿದ್ಯಾರ್ಥಿಗಳು ಇವರ ನಿರ್ದೇಶನ “ಜಗದ ಬಿರುಕಿಗೆ ಗಾಂಧಿ ಮದ್ದು” ಎಂಬ ನಾಟಕವನ್ನು ಸಾಣೇಹಳ್ಳಿಯ ಅತ್ಯಾಧುನಿಕ ಸುಸಜ್ಜಿತವಾದ ರಂಗ ಮಂದಿರದಲ್ಲಿ  ಅದ್ಭುತ ಪ್ರದರ್ಶನ ನೀಡಿ “ರಾಷ್ಟ್ರೀಯ ನಾಟಕೋತ್ಸವ” ದಲ್ಲಿ ಪ್ರದರ್ಶಿಸಿದ ಮೊದಲ ಎರಡು ಸರ್ಕಾರಿ ಪ್ರೌಢಶಾಲೆಗಳಲ್ಲಿ ಒಂದು ಕೋಣಂದೂರಿನ ಸರ್ಕಾರಿ ಪ್ರೌಢಶಾಲೆಯು ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗುವಲ್ಲಿ ಇವರ ಶ್ರಮ ಅಪಾರವಾಗಿರುತ್ತದೆ. ಸರ್ಕಾರಿ ಪ್ರೌಢಶಾಲೆಗೆ ನಾಟಕ ವಿಷಯಕ್ಕೆ ವಿಶೇಷ ಶಿಕ್ಷಕರ ಹುದ್ದೆಗೆ ನೇಮಕ ವಾಗಿದ್ದರೂ 2009 - ರಿಂದ 2017 ರವರೆಗೆ ಶಾಲೆಯಲ್ಲಿ ಹಿಂದಿ, ಸಮಾಜ ವಿಜ್ಞಾನ, ಇಂಗ್ಲೀ಼ಷ್ ವಿಷಯ ಶಿಕ್ಷಕರ ಕೊರತೆಯಾದ ಸತತ ಒಂಬತ್ತು ಶೈಕ್ಷಣಿಕ ಅವಧಿಗಳಿಗೆ ಆಯಾ ವಿಷಯ ಬೋಧನೆ ಮಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ನೀಡಲು ಸಹಕರಿಸಿ ಶಿಕ್ಷಕರ ಕೊರತೆಯನ್ನು ನಿಭಾಯಿಸಿದ ಗೌರವ ಇವರಿಗೆ ಸಲ್ಲುತ್ತದೆ. ನಾಟಕ ವಿಷಯ ಬೋಧನೆಯ ಜೊತೆಗೆ 2009 ರಿಂದ 2021 ಈವರೆಗೂ ಶಾಲೆಯ ಗ್ರಂಥಾಲಯ, ಮತ್ತು ಎಲ್ಲಾ ಎಲೇಕ್ಟ್ರೀಷಿಯನ್ ವಸ್ತುಗಳನ್ನು ನಿರ್ವಹಿಸುತ್ತಾ ಬಂದಿರುತ್ತಾರೆ.     ನಾಟಕ ವಿಷಯ ಬೋಧನೆಯ ಜೊತೆಗೆ ಶಾಲೆಯ ಎಲ್ಲಾ ಗಣಕೀಕೃತ (ಕಂಪ್ಯೂಟರ್) ಕೆಲಸವನ್ನು ನಿರ್ವಹಿಸುವ ಮೂಲಕ ಆಡಳಿತಾತ್ಮಕ ಕೆಲಸ ಶೀಘ್ರ ಕಾರ್ಯರೂಪಕ್ಕೆ ಬರಲು ಸಹಕಾರಿಯಾಗಿರುತ್ತಾರೆ. ಶಾಲೆಯ ಕೈತೋಟ, ಶಾಲಾ ಸ್ವಚ್ಛತೆ, ಶಾಲೆಯ ಎಲ್ಲಾ ಪರಿಕರಗಳನ್ನು ಅತ್ಯಂತ ಜಾಗ್ರತೆಯಿಂದ ಕಾಪಾಡಿಕೊಂಡು ಶಾಲೆಯ ಆಸ್ತಿ ಪಾಸ್ತಿಗಳಿಗೆ ಹಾನಿಯಾಗದಂತೆ ಅತ್ಯಂತ ಮುತುವರ್ಜಿವಹಿಸಿರುತ್ತಾರೆ.     ತೀರ್ಥಹಳ್ಳಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ , ರಂಗ ಸಂಸ್ಥೆಗಳಿಗೆ ರಂಗ ತರಬೇತಿ ಮತ್ತು ನಾಟಕ ನಿರ್ದೇಶನ ಮಾಡಿ ತಾಲೂಕಿನ ವಿದ್ಯಾರ್ಥಿಗಳ ಮತ್ತು ಕಲಾವಿದರ ಪ್ರತಿಭೆಯನ್ನು ರಾಜ್ಯ ಮಟ್ಟದ ವರೆಗೆ ಗುರುತಿಸಲು 12 ವರ್ಷದಿಂದ ಪ್ರಾಮಾಣಿಕವಾದ ಪ್ರಯತ್ನ ಮಾಡಿರುತ್ತಾರೆ.

ಉದಾ: ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ, ಶರಾವತಿ ಮಹಾವಿದ್ಯಾ ಲಯ ಕೋಣಂದೂರು, ನಟ ಮಿತ್ರರು (ರಿ.) ತೀರ್ಥಹಳ್ಳಿ. ಕಾಲೇಜು ಮತ್ತು ಸಂಸ್ಥೆಗಳಿಗೆ ನಾಟಕ ನಿರ್ದೇಶನ ಮಾಡಿ ಆ ನಾಟಕಗಳ ಪ್ರದರ್ಶನ ರಾಜ್ಯ ಮಟ್ಟದಲ್ಲಿ ಮನ್ನಣೆ ಪಡೆದಿರುತ್ತದೆ.

ವರದಿ : ಶ್ರೀಕಾಂತ್ ವಿ ನಾಯಕ್ ತೀರ್ಥಹಳ್ಳಿ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು