ದೇವಸ್ಥಾನಗಳ ಪಟ್ಟಿ ಪುನರ್ಪರಿಶೀಲಿಸಿ: ಧಾರ್ಮಿಕ ಮುಖಂಡರ ಆಗ್ರಹ

 

ವಿಜಯ ಸಂಘರ್ಷ



ಶಿಕಾರಿಪುರ : ಅನಧಿಕೃತ ಎಂದು ಬಿಂಬಿಸುವ ದೇವಸ್ಥಾನಗಳ ಪಟ್ಟಿ ಯನ್ನು ಪುನರ್ಪರಿಶೀಲಿಸಬೇಕೆಂದು ಒತ್ತಾಯಿಸಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಸಿಎಂ ಗೆ ಮನವಿ ಸಲ್ಲಿಸಿದರು.



ಈ ವೇಳೆ ಮಾತನಾಡಿದ ಧಾರ್ಮಿಕ ಮುಖಂಡ ಪರಶುರಾಮ ಕರ್ನಾಟಕ ರಾಜ್ಯದಲ್ಲಿ ಕೆಲವು ದಿನಗಳಿಂದ ಅನಧಿಕೃತ ದೇವಸ್ಥಾನದ ಹೆಸರಿನಲ್ಲಿ ದೇವಾಲಯಗಳನ್ನು ಧ್ವಂಸ ಮಾಡುವ ಕಾರ್ಯನಡೆಯುತ್ತಿದೆ.

ಅಧಿಕಾರಿಗಳು ಸರ್ವೋಚ್ಚ ನ್ಯಾಯಾ ಲಯದ ಅದೇಶವನ್ನು ತಪ್ಪಾಗಿ ಅರ್ಥಮಾಡಿಕೊಂಡು ನೂರಾರು ವರ್ಷಗಳ ಇತಿಹಾಸ, ಸಾವಿರಾರು ಹಿಂದೂ ಧಾರ್ಮಿಕ ಸ್ಥಳಗಳನ್ನು ಅನದಿಕೃತವೆಂದು ದೋಷಪೂರಿತ ಪಟ್ಟಿಯನ್ನು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದರು.

ಇತ್ತೀಚೆಗೆ ನಂಜನಗೂಡಿನಲ್ಲಿರುವ ಛೋಳರ ಕಾಲದ 800 ವರ್ಷದ ಶ್ರೀ. ಆದಿಶಕ್ತಿ ದೇವಸ್ಥಾನವನ್ನು ಅನಧಿಕೃತ ವೆಂದು ಸರ್ವೋಚ್ಚ ನ್ಯಾಯಾಲಯದ ಆದೇಶದ ನೆಪದಲ್ಲಿ ತಹಶೀಲ್ದಾರರು ರಾತ್ರೋರಾತ್ರಿ ಧ್ವಂಸ ಮಾಡಿದರು.

ಅದಕ್ಕೆ ವೀರಗಲ್ಲು ಶಾಸನ ಸಹ ಈ ದೇವಸ್ಥಾನವು ಈ ಭಾಗದ ಜನರಿಗಿರುವ ಏಕೈಕ ಧಾರ್ಮಿಕ ಸ್ಥಳವಾಗಿತ್ತು ಮತ್ತು ರಸ್ತೆಯಿಂದ 40 ಅಡಿ ದೂರದಲ್ಲಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿ ಕರಿಗೆ ತೊಂದರೆ ನೀಡುವಂತದ್ದಾಗಿ ರಲಿಲ್ಲ.ಆದರೂ ಸಹ ಅನದಿಕೃತವೆಂದು ಪೂರ್ವ ಸೂಚನೆಯನ್ನು ನೀಡದೇ, ರಾತ್ರೋರಾತ್ರಿ ದೇವಸ್ಥಾನಗಳನ್ನು ತೆರವು ಮಾಡಿ, ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗಿದೆ.

ಜುಲೈ 1 ರಂದು ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ ಇವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಳಿಸಿದ ಅನದಿಕೃತ ದೇವಸ್ಥಾನಗಳ ಪಟ್ಟಿಯಲ್ಲಿ 6 ಸಾವಿರಕ್ಕೂ ಅಧಿಕ ಧಾರ್ಮಿಕ ಸ್ಥಳಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1579 ಧಾರ್ಮಿಕ ಸ್ಥಳಗಳ ಪಟ್ಟಿ ಮಾಡಲಾಗಿದೆ.

ಪಟ್ಟಿಯಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಪ್ರಾಚೀನ ದೇವಸ್ಥಾನ ಗಳನ್ನು ಕೂಡ ಸೇರಿಸಲಾಗಿದೆ. ಈ ಪಟ್ಟಿಯನ್ನು ಗಮನಿಸಿದಾಗ, ಆಧಾರ ರಹಿತವಾಗಿದ್ದು, ಅಧಿಕಾರಿಗಳು ತರಾತುರಿಯಲ್ಲಿ ಸ್ಥಳ ತನಿಕೆ ನಡೆಸದೇ ಪಟ್ಟಿ ಮಾಡಿದ್ದಾರೆ ಮತ್ತು ಆ ಪಟ್ಟಿಯಲ್ಲಿ ಧಾರ್ಮಿಕ ಸ್ಥಳಗಳು ಯಾವಾಗ ನಿರ್ಮಾಣವಾಯಿತು ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವುದು ಸಂಶಯಾಸ್ಪದವಾಗಿದೆ. ಇದು ಅಧಿಕಾರಿ ಗಳ ಬೇಜವಾಬ್ದಾರಿ, ನಿರ್ಲಕ್ಷ ಮತ್ತು ಅಜ್ಞಾನದ ಪರಮಾವಧಿಯಾಗಿದೆ ಎಂದರು.

ಅದಲ್ಲದೇ ತೆರವು ಪಟ್ಟಿಯಲ್ಲಿ ಕೇವಲ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿ, ಅನ್ಯ ಮತದವರ ಧಾರ್ಮಿಕ ಸ್ಥಳಗಳನ್ನು ಉದ್ದೇಶ ಪೂರ್ವಕವಾಗಿ ಕೈಬಿಡಲಾಗಿದೆ. ಅನ್ಯ ಧರ್ಮಿಯರ ಸಾವಿರಾರು ಅನಧಿಕೃತ ಧಾರ್ಮಿಕ ಕಟ್ಟಡಗಳು ಇರುವಾಗಲೂ, ಅದನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಸಂಶಯಾಸ್ಪದವಾಗಿದೆ ಎಂದು ಕಿಡಿಕಾರಿದರು.

ಅನಧಿಕೃತ ಎಂದು ಬಿಂಬಿಸುವ ದೇವಸ್ಥಾನಗಳ ಪಟ್ಟಿಯನ್ನು ಪುನರ್ಪರಿಶೀಲಿಸಬೇಕೆಂದು ಒತ್ತಾಯಿಸಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮನವಿ ಸಲ್ಲಿಸಿದರು.

ತೆರವು ಪಟ್ಟಿಯಲ್ಲಿ ಕೇವಲ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿ, ಅನ್ಯಮತದವರ ಧಾರ್ಮಿಕ ಸ್ಥಳಗಳನ್ನು ಉದ್ದೇಶ ಪೂರ್ವಕವಾಗಿ ಕೈಬಿಡಲಾಗಿದೆ. ಅನ್ಯ ಧರ್ಮಿಯರ ಸಾವಿರಾರು ಅನಧಿಕೃತ ಧಾರ್ಮಿಕ ಕಟ್ಟಡಗಳು ಇರುವಾಗಲೂ, ಪಟ್ಟಿಯಿಂದ ಕೈಬಿಟ್ಟಿರುವುದು ಸಂಶಯಾಸ್ಪದ ವಾಗಿದೆ.ಒಟ್ಟಾರೆ ಈ ಸರ್ಕಾರಿ ಅಧಿಕಾರಿಗಳು ತಯಾರಿ ಮಾಡಿದ ಅನಧಿಕೃತ ಪಟ್ಟಿಗಳು ದೋಷಪೂರಿತ ವಾಗಿದ್ದು, ಹಿಂದೂ ವಿರೋಧಿಯಾಗಿದೆ.

ಹೀಗಾಗಿ ದೋಷ ಪೂರಿತವಾಗಿ ತಯಾರಿ ಮಾಡಿದ ಈ ಅನಧಿಕೃತ ಪಟ್ಟಿಯನ್ನು ಕೂಡಲೇ ಪರಿಷ್ಕರಿಸಬೇಕು ಮತ್ತು ಈ ಪಟ್ಟಿಯ ಆಧಾರದ ಮೇಲೆ ಧ್ವಂಸ ಮಾಡಿದ ದೇವಾಲಯಗಳ ಮರು ಸ್ಥಾಪನೆಯಾಗಬೇಕು.

ಸರ್ಕಾರದ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪುನರ ಪರಿಶೀಲನೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ, ಕಾನೂನು ಹೋರಾಟ ನಡೆಸಬೇಕು. ಹಾಗೂ ಹಾಲಿ ಅಥವಾ ಮುಂದಿನ ಅಧಿವೇಶನದಲ್ಲಿ ಹಿಂದೂ ದೇವಾಲಯ ದ ಸಂರಕ್ಷಣೆ, ಪುನರನಿರ್ಮಾಣ, ಸ್ಥಳಾಂತರದ ಬಗ್ಗೆ ಮಸೂದೆಯನ್ನು ಮಂಡಿಸಿ ಕಾಯಿದೆಯನ್ನು ರೂಪಿಸ ಬೇಕು ಎಂದು ಒತ್ತಾಯಿಸಲಾಯಿತು.

ಮನವಿ ಸಲ್ಲಿಸುವ ಸಂಧರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಪರಶುರಾಮ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಭವರ್ ಸಿಂಗ್, ತಾಲೂಕು ಉಪಾಧ್ಯಕ್ಷ ಪ್ರಕಾಶ್ ಎಂ.ಎಸ್.ಗಿರೀಶ್ ಘೋರ್ಪಡೆ, ಮಂಜಣ್ಣ ರಾಜಲಕ್ಷ್ಮೀ, ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ವಿ.ರಘು, ಶ್ರೀ ಯಲ್ಲಮ್ಮ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಈರೇಶ್, ಜಯಕರ್ನಾಟಕ ಜನಪರ ವೇದಿಕೆಯ ಸಂಘಟನೆಯ ಶಿವಯ್ಯ ಶಾಸ್ತ್ರಿ, ಸಂತೋಷ್, ಜಗದೀಶ್, ಶ್ರೀಧರ್ ಮತ್ತಿತರರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು