ವಿಜಯ ಸಂಘರ್ಷ
ಭದ್ರಾವತಿ: 'ಆಜಾದಿ ಕ ಅಮೃತ್ ಮಹೋತ್ಸವ' ಆಚರಣೆಯ ಅಂಗವಾಗಿ ವಿಐಎಸ್ ಎಲ್ ಕಾರ್ಖಾನೆ ವತಿಯಿಂದ ಆಂಗ್ಲ ಭಾಷೆಯಲ್ಲಿ ``75 years of India’s Independence – What Does Fredom Mean to Me ?'' ವಿಷಯವಾಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೌಢಶಾಲೆಯಲ್ಲಿ ಆಯೋಜಿಸ ಲಾಗಿತ್ತು.
ಸ್ಪರ್ಧೆಯಲ್ಲಿ ವಿವಿಧ 15 ಶಾಲೆಗಳ ಒಟ್ಟು 27 ವಿದ್ಯಾರ್ಥಿಗಳು ಭಾಗವಹಿಸಿ ದ್ದರು. ಕಾರ್ಖಾನೆಯ ಮುಖ್ಯ ಮಹಾ ಪ್ರಬಂಧಕ (ಆಪರೇಷನ್) ಕೆ.ಎಸ್. ಸುರೇಶ್ ಸ್ಪರ್ಧೆಯನ್ನು ಉದ್ಘಾಟಿಸಿ ದರು. ಮಹಾ ಪ್ರಬಂಧಕ ಪ್ರಬಾರಿ (ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರವರ್ತಿ, ಪ್ರಾಂಶುಪಾಲ ಬಿ.ಎನ್ ಗಿರೀಶ್ ಉಪಸ್ಥಿತರಿದ್ದರು.
ಇಂಚರ ತಂಡದವರು ಪ್ರಾರ್ಥಿಸಿದರು. ಮಹಾಪ್ರಬಂಧಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್. ಪ್ರವೀಣ್ ಕುಮಾರ್ ಸ್ವಾಗತಿಸಿದರೆ, ವಿದ್ಯಾರ್ಥಿನಿ ಸಂಜನಾ ನಿರೂಪಿಸಿದರು.
ಶಿಕ್ಷಕಿ ಮಮತ, 'ಇಂದಿನ ಜನಾಂಗಕ್ಕೆ ಭಾರತ ಸ್ವಾತಂತ್ರ್ಯ ಸಂಗ್ರಾಮದಿಂದ ಕಲಿಯಬೇಕಾದ ಪಾಠಗಳು' ಎಂಬ ವಿಷಯದ ಬಗ್ಗೆ ಭಾಷಣ ಮಾಡಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನದ ರೂಪದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಕುರಿತ ಪುಸ್ತಕ ಗಳನ್ನು ನೀಡಲಾಗಿದೆ.
ವಿಜೇತ ವಿದ್ಯಾರ್ಥಿಗಳು:
1. ಯಶಸ್ವಿನಿ ಚಿಕ್ಕಮಠ್, ಎಸ್‌ಎವಿ ಶಾಲೆ(ಪ್ರಥಮ) 2. ಪತೀಕ್ಷಾ ದಯಾನಂದ್, ಪೂರ್ಣಪ್ರಜ್ಞ ಶಾಲೆ, (ದ್ವಿತೀಯ), 3. ಎಚ್.ವೈ ಚಂದನ, ಬಿಜಿಎಸ್ ಶಾಲೆ (ತೃತೀಯ), 4. ಸ್ಪೂರ್ತಿ, ಪಿಟಿಇಎಸ್ ಶಾಲೆ (ತೃತೀಯ), 5. ಆರ್. ಹೇಮಾಲತಾ, ಶ್ರೀ ಸತ್ಯಸಾಯಿ ಬಾಬಾ ಶಾಲೆ (ಸಮಾಧಾನಕರ), 6. ನೈಯೋಲ್ ಕ್ವಾಡ್ರಸ್, ಸೇಂಟ್ ಚಾರ್ಲ್ಸ್ ಶಾಲೆ,(ಸಮಾಧಾನಕರ) ಮತ್ತು 7. ಜಿ. ಯಶಸ್ವಿ, ಸೇಂಟ್ ಚಾರ್ಲ್ಸ್ ಶಾಲೆ(ಸಮಾಧಾನಕರ) ಬಹುಮಾನಗಳನ್ನು ಪಡೆದುಕೊಂಡರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795