ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೇವಾ ಭದ್ರತೆ ನೀಡಿ: ಶಶಿಕುಮಾರ್ ಎಸ್ ಗೌಡ

 

ವಿಜಯ ಸಂಘರ್ಷ



ಭದ್ರಾವತಿ : ರಾಜ್ಯದ ಎಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ  ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು,  ಆಯುರ್ವೆದ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಡಿ ಗ್ರೂಪ್ ನೌಕರರು,  ನರ್ಸ್ ಗಳು ಹಾಗೂ ಇತರೆ ಸಿಬ್ಬಂದಿಗಳು ಕನಿಷ್ಠ ವೇತನ ವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದು, ಕೂಡಲೇ ಕನಿಷ್ಠ ವೇತನ ನೀಡುವಂತೆ ಜೆಡಿಯು ಮುಖಂಡ ಶಶಿಕುಮಾರ್ ಎಸ್. ಗೌಡ ಇಂದು ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಎನ್ ಆರ್ ಎಚ್ ಎಂ ಸ್ಕೀಮ್ ಅಡಿಯಲ್ಲಿ ಪ್ರಸ್ತುತ 13 ಸಾವಿರ  ರೂಗಳನ್ನು ಪಡೆದು ಕಾರ್ಯನಿರ್ವ ಹಿಸುತ್ತಿದ್ದಾರೆ. ಆಯುರ್ವೆದ ವೈದ್ಯರು ಗಳಿಗೆ 15 ಸಾವಿರ ರೂ, ಲ್ಯಾಬ್ ಟೆಕ್ನಿಷಿಯನ್, ನರ್ಸ್ ಗಳು ಡಿ ಗ್ರೂಪ್ ನೌಕರರು ಕೇವಲ 8500/-ಗೌರವಧನ ನೀಡುತ್ತಿದ್ದು, ಜೀವನ ನಿರ್ವಹಣೆ ಕಷ್ಟ ಕರವಾಗಿದೆ. ಕಾರ್ಮಿಕ ಕಾಯ್ದೆ ಅನ್ವಯ ಪ್ರತಿಯೊಬ್ಬ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಟ 23 ಸಾವಿರ ರೂ ಗಳನ್ನು ನೀಡಬೇಕೆಂದು ಸ್ಪಷ್ಟ ನಿಯಮವಿದ್ದರು ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಕೊರೋನ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿ ಗಳಿಗೆ ಯಾವುದೇ ಸರ್ಕಾರಗಳು ಕೂಡ ಸ್ಪಂದಿಸುತ್ತಿಲ್ಲ.

ಕೂಡಲೇ ಎಲ್ಲ ಆರೋಗ್ಯ ಸಿಬ್ಬಂದಿ ಗಳಿಗೆ ಸೇವೆ ಖಾಯಂಗೊಳಿಸಿ ಆಯುರ್ವೆದ  ವೈದ್ಯರು ಗಳಿಗೆ, 30 ಸಾವಿರ, ಉಳಿದ ಎಲ್ಲಾ ಆರೊಗ್ಯ ಸಿಬ್ಬಂದಿಗಳಿಗೆ ಕನಿಷ್ಠ 14300/-ಇಂದ 23 ಸಾವಿರ ರೂ ವೇತನವನ್ನು ನೀಡಿ ಸೇವಾ ಗೌರವ ನೀಡಬೇಕೆಂದು ಗ್ರೇಡ್-2 ತಹಸೀಲ್ದಾರ್ ರಂಗಮ್ಮ ರವರ ಮೂಲಕ ಪ್ರಧಾನಿ ನರೇಂದ್ರ ಮೋದಿ ರವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 974322579

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು