ವಿಜಯ ಸಂಘರ್ಷ
ಶಿವಮೊಗ್ಗ : ನಗರದ ಡಿಸಿ ಕಚೇರಿಯ ನೌಕರ ಗಿರಿರಾಜ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಸಂದೇಶ ರವಾನಿಸಿ ಒಂದು ದಿನ ಕಳೆದಿದ್ದು, ಅವರ ಅಸ್ಥಿತ್ವದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನಿನ್ನೆ ಬೆಳಿಗ್ಗೆ 6 ಗಂಟೆಗೆ ಮನೆ ಬಿಟ್ಟು ಹೋಗಿದ್ದ ಗಿರಿರಾಜ್ ಸುಮಾರು ಎಂಟರ ಹೊತ್ತಿಗೆ ಅವರ ಮೊಬೈಲ್ ಲೊಕೇಶನ್ ಬುದ್ದನಗರವೆಂದು ತಿಳಿಸಿದೆ. ಈ ಸಂದರ್ಭದಲ್ಲಿ ಸುಧೀರ್ಘ ಮೊಬೈಲ್ ಮೂಲಕ ವಾಟ್ಸಪ್ ಸಂದೇಶಗಳನ್ನು ರವಾನಿಸಿದ್ದಾರೆ.
ನಂತರ ಭದ್ರಾವತಿ ಯರೇಹಳ್ಳಿ ಬಳಿ ಅವರ ಮೊಬೈಲ್ ಲೊಕೇಷನ್ ಸ್ವಿಚ್ ಆಫ್ ಆಗಿದೆ. ವಿಷಯ ತಿಳಿದ ತಕ್ಷಣವೇ ಎಡಿಸಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ತಹಶೀಲ್ದಾರ್ ಡಾ.ನಾಗರಾಜ್ ಎಸಿ ಪ್ರಕಾಶ್, ಭದ್ರಾವತಿ ತಹಶೀಲ್ದಾರ್ ಪ್ರದೀಪ್ ಮೊಬೈಲ್ ಲೊಕೇಶನ್ ಜಾಡು ಹಿಡಿದು ಹುಡುಕಲು ಆರಂಭಿ ಸಿದ್ದಾರೆ.
ನಿನ್ನೆ ಭದ್ರಾವತಿ ತಾಲ್ಲೂಕಿನ ಉದಾಂಜ ನೇಯ ಸ್ವಾಮಿ ದೇವಸ್ಥಾನ, ಅಂತರ ಗಂಗೆ, ಎರೇಹಳ್ಳಿ, ಹಡ್ಲಗಟ್ಟ, ಮಾವಿನ ಕೆರೆ ಈ ಭಾಗದ ಭದ್ರಾ ಬಲದಂಡೆ ನಾಲೆ ಭಾಗಗಳಲ್ಲಿ ಹುಡುಕಾಟ ಆರಂಭಿಸಿ ದ್ದಾರೆ. ಇಂದು ಸಹ ಈ ಭಾಗದಲ್ಲಿ ಹುಡುಕಾಟ ಆರಂಭಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಆದರೆ ಗಿರಿರಾಜ್ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಮಾರುತಿ ನಗರದ ಮೂಲಕ ಬಾರಂದೂರು ಗ್ರಾಮದವರೆಗೆ ರೈಲ್ವೆ ಟ್ರ್ಯಾಕ್ ಮೇಲೂ ಸುಮಾರು 5 ಕಿಮಿ ವರೆಗೆ ಶೋಧಕಾರ್ಯ ನಡೆದಿದೆ. ಎಲ್ಲೂ ಗಿರಿರಾಜ್ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಇಂದು ಸಹ ಹುಡುಕಾಟ ಮುಂದುವರೆದಿದೆ.
ವಿಜಯ ಸಂಘರ್ಷಕ್ಕೆ ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795