ವಿಜಯ ಸಂಘರ್ಷ
ಭದ್ರಾವತಿ: ಜೇಷ್ಠತಾ ಆಧಾರದಮೇಲೆ ಸ್ಥಳೀಯರಿಗೆ ಅಂಗನವಾಡಿ ಹುದ್ದೆ ನೀಡುವಂತೆ ಆಗ್ರಹಿಸಿ ಹಳೇನಗರ ದುರ್ಗಿನಗರದ ನಿವಾಸಿ ಶಫಿವುಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬುಧವಾರ ಶಿಶುಅಭಿವೃದ್ಧಿ ಅಧಿಕಾರಿಗಳ ಮುಂಭಾಗ ಸ್ಥಳೀಯ ನೂರಾರು ಮಹಿಳೆಯರೊಂದಿಗೆ ಜಮಾಯಿಸಿದ ಅವರು ದುರ್ಗಿನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಮನೆ ಮನೆಗೆ ಭೇಟಿನೀಡಿ ಪರಿಶೀಲನೆ ಸರಿಪಡಿಸದೆ ಅನ್ಯಾಯ ಮಾಡಿರುತ್ತಾರೆ.
ಅದೇ ವಾರ್ಡಿನ ರೇಷ್ಮಾಭಾನು ಎಂಬುವವರು ಅತಿಹೆಚ್ಚು ಅಂಕಗಳನ್ನು ಪಡೆದಿದ್ದರು ಸಹ ಆಧ್ಯತೆ ನೀಡದೆ ಕಡಿಮೆ ಅಂಕಗಳನ್ನು ಪಡೆದ ಸುಮಾ ಎಂಬುವವರಿಗೆ ಹುದ್ದೆ ನೀಡಿರುವುದು ನಿಯಮಾನುಸಾರ ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.
ಈ ಕೂಡಲೇ ಸುಮಾರವರ ಆದೇಶ ರದ್ದು ಪಡಿಸಿ ಸ್ಥಳೀಯವಾಗಿ ಮತ್ತೊಮ್ಮೆ ಪರಿಶೀಲಿಸಿ, ಅತಿಹೆಚ್ಚು ಅಂಕ ಪಡೆದ ರೇಶ್ಮಾಭಾನು ರವರಿಗೆ ಕಾರ್ಯಕರ್ತೆಯ ಹುದ್ದೆ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನಾಸೀರ್ ಅಹಮ್ಮದ್, ಅಬ್ದುಲ್ ಖದೀರ್,ಎಂ.ಡಿ. ಇಮ್ರಾನ್, ನಿಸಾರ್ ಅಹಮದ್, ಮಹಮ್ಮದ್ ಶಫಿ, ಅಖಿಲಾ ಬೇಗಂ, ಸಯ್ಯದ್ ಮಹಬೂಬ್ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಸಿಡಿಪಿಓ ರವರಿಗೆ ಮನವಿ ಸಲ್ಲಿಸಿದರು.
ವಿಜಯ ಸಂಘರ್ಷಕ್ಕೆ ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795