ಸ್ಮಾರ್ಟ್ ಸಿಟಿ ಕಾಮಗಾರಿ ಗಳಿಂದ ವಾಹನಗಳು ಜಖಂ

 

ವಿಜಯ ಸಂಘರ್ಷ



ಶಿವಮೊಗ್ಗ : ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗೆ ಮಾರುತಿ ಶಿಫ್ಟ್ ಕಾರೊಂದು ದಾರಿಮಧ್ಯೆ ಹೂತು ಕೊಂಡ ಪರಿಣಾಮ ಕೆಲಸದವರ ಸಹಾಯದಿಂದ ಹೊರಗೆ ತೆಗೆಯಲಾಗಿದೆ.

ಲಕ್ಷಾಂತರ ರೂ ಕಾರುಗಳು ಸ್ಮಾರ್ಟ್ ಸಿಟಿ ಕಾಮಗಾರಿಗೆ ಹಾಳಾಗುತ್ತಿದೆ. ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಂದು ಕಾರು ಮಾಲೀಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಕಾಮಗಾರಿಯಿಂದ ಮರದ ಬುಡಗಳೇ ಅಲುಗಾಡಿವೆ. ನಿನ್ನೆ ರಾತ್ರಿಯಷ್ಟೇ  ಕಾರಿನ ಮೇಲೆ ಬಿದ್ದು ಜಖಂ ಆಗಿದೆ. ಅದೆಷ್ಟೋ ದನಕರುಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಾಕ್ಸ್ ಚರಂಡಿಗೆ ಬಿದ್ದು ಗಾಯಗೊಂಡಿವೆ. ಆದರೂ ಯೋಜನೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಇಂದು ದುರ್ಗಿಗುಡಿ ಶನೈಶ್ವರ‌ ದೇವಾಲಯದ ಹಿಂಭಾಗದ ರಸ್ತೆಯಲ್ಲಿ ಕೆಎ 02 ಎಂಡಿ 7025 ಕ್ರಮ ಸಂಖ್ಯೆಯ ಮಾರುತಿ ಶಿಫ್ಟ್ ಕಾರು ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಮುಂದಿನ ಚಕ್ರ ವೊಂದು ಮಣ್ಣಿನಲ್ಲಿ ಹೂತುಕೊಂಡಿದೆ. ಎದುರುಗಡೆಯ ವಾಹನಕ್ಕೆ ದಾರಿ ಬಿಡುವಾಗ ಈ ಅವಘಡ ಸಂಭವಿಸಿದೆ.

ಸ್ಥಳದಲ್ಲಿ ಕೆಲಸ ಮಾಡುವವರೇ ಕಾರನ್ನ ತಳ್ಳಿ ಮಣ್ಣಿನಲ್ಲಿ ಹೂತುಕೊಂಡ ಕಾರನ್ನ ಹೊರ ತೆಗೆದಿದ್ದಾರೆ. ಕಾರಿನ ಮುಂಭಾಗ ದ ಬಂಪರ್ ಕಿತ್ತುಹೋಗಿದೆ. ಇಷ್ಟೆಲ್ಲಾ ಅನಾಹುತ ಸಂಭವಿಸುತ್ತಿದ್ದರು  ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳು ಸ್ಥಳದಲ್ಲಿ ಇಲ್ಲದಿರುವುದು ಕಂಡು ಬಂದಿದೆ. ಬೇಕಾಬಿಟ್ಟಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಸಂಚಾರಕ್ಕೆ ಅಡಚರಣೆ ಆಗಿದೆ. ಆದರೆ ಅಧಿಕಾರಿ ಗಳಿಂದ ಯಾವ ಸ್ಪಂಧನೆಯು ಇಲ್ಲ.

ಕಾಮಗಾರಿ ಸ್ಥಳದಲ್ಲಿ ಕಾಮಗಾರಿ ಪ್ರಗತಿಯ ಯಾವ ಫಲಕವೂ ಹಾಕದೆ ಕಾಮಗಾರಿ ನಡೆಯುತ್ತಿದೆ. ಸ್ಥಳಕ್ಕೆ ಬಂದ ಗುತ್ತಿಗೆದಾರ ಬಂದು ಬೋರ್ಡ್ ಹಾಕ್ತಾ ಇದ್ದೇವೆ. ಬ್ಯಾರಿಕೇಡ್ ಹಾಕ್ತಾ ಇದ್ದೀವಿ ಎನ್ನುತ್ತಾರೆ ಎಲ್ಲಿದೆ ಎಂದು ಕೇಳಿದರೆ ಹಾಕ್ತೀವ್ರಿ ಎನ್ನುತ್ತಾರೆ. ಒಟ್ಟಿನಲ್ಲಿ ಕಾನೂನು ಬಾಹಿರವಾಗಿ ಕಾಮಗಾರಿ ನಡೆಯುತ್ತಿರುವುದು ಎಷ್ಟೋ ಮೂಕ ಪ್ರಾಣಿಗಳ ಹಾಗೂ ಅಸಹಾಯಕರ ಜೀವಕ್ಕೆ ತುತ್ತಾಗಲಿದೆ. ಇದರಿಂದ ಇನ್ನೆಷ್ಟು ಬಲಿಯಾಗಬೇಕೋ ಗೊತ್ತಿಲ್ಲ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು