ನಿಮ್ಮ ಸಹಾಯ ಬೇಕಿದೆ ಈ ಹಸುಗೂಸಿಗೆ..!

ವಿಜಯ ಸಂಘರ್ಷ 



ಹೊಸನಗರ : ತಾಲೂಕಿನ ರಿಪ್ಪನ್ ಪೇಟೆ ತೀರ್ಥಹಳ್ಳಿ ರಸ್ತೆ ಶಬರೀಶನಗರ ನಿವಾಸಿ ಭರತ್ ಹಾಗು ಶ್ವೇತ ದಂಪತಿಯ ಏಳು ತಿಂಗಳಿಗೆ ಜನಿಸಿದ ಹಸುಗೂಸು ಉಸಿರಾಟದ ಸಮಸ್ಯೆಯಿಂದ ಸಾವು ಬದುಕಿನ ಮದ್ಯೆ ಹೋರಾಡುತ್ತಿದೆ.



ಸದ್ಯ ಮಗುವಿಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗು ತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಲಕ್ಷಾಂತರ ರೂ ವೆಚ್ಚವಾಗಲಿದೆ ಎಂದು ಜನ್ಮದಾತರು  ಅಂಗಲಾಚಿದ್ದಾರೆ. ಉಸಿರಾಟದ ತೊಂದರೆ, ಸೆಳವು ಅಥವಾ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳಲು ಅಸಮರ್ಥತೆಯ ಮತ್ತು ಮೆದುಳಿನಲ್ಲಿ ನೀರು ತುಂಬಿಕೊಂಡಿರುವ ತೊಂದರೆ ಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದೆ.

ಈ ಕುಟುಂಬದಲ್ಲಿ  ಲಕ್ಷಾಂತರ ವೆಚ್ಚ ಪಾವತಿಸಲು ಆರ್ಥಿಕವಾಗಿ ಬಲಹೀನ ರಾಗಿದ್ದಾರೆ.ಸಹೃದಯಿ ದಾನಿಗಳು ಈ ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿದಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ನೆರವಾದಿತು, ಮಾತ್ರವಲ್ಲ ಅವರಿಗೆ ಮಾನಸಿಕ ಸ್ಥೈರ್ಯ ತುಂಬಲು ಸಾಧ್ಯವಿದೆ.ಯಾರಾದರೂ ದಾನಿಗಳು ಸಹಾಯಕ್ಕೆ ಮುಂದಾದರೆ ಸಾಕು ಅನ್ನುವಂಥ ಪರಿಸ್ಥಿತಿಯಲ್ಲಿ ಈ ಕುಟುಂಬ ಈಗ ಪರಿತಪಿಸುತ್ತಿದೆ. ಜನಪ್ರತಿನಿಧಿಗಳು ಹಾಗೂ ನೆರೆಹೊರೆಯವರು ಸಾವು ಬದುಕಿನ ಮದ್ಯ ಹೋರಾಡುತ್ತಿರುವ ಮಗುವಿಗೆ ನೆರವಾಗಬೇಕು ಎಂದು ಈ ಕುಟುಂಬ ಸಹಾಯ ಯಾಚಿಸುತ್ತಿದೆ.

ಭರತ್ ಅವರ ತಂದೆ ಶಬರೀಶ ನಗರ ವಾಸಿ ಗಣೇಶ್ (ಗಣಿ) ಇವರು ರಿಪ್ಪನ್ ಪೇಟೆ ವ್ಯಾಪ್ತಿಯಲ್ಲಿ ಹೋಮ್ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಯಾರಾದರೂ ಈ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವವರು ಈ ಖಾತೆ ಸಂಖ್ಯೆ ಹಾಗೂ ಗೂಗಲ್ ಪೇ ಸಂಖ್ಯೆಯನ್ನು ಸಂಪರ್ಕಿಸಿ.
ಹೆಸರು -ಭರತ್
ಕೆನರಾ ಬ್ಯಾಂಕ್ ಖಾತೆ ನಂ : 0534119019211
IFSC ಕೋಡ್ -CNRB0000534
ಬ್ರಾಂಚ್ -ರಿಪ್ಪನ್ ಪೇಟೆ
ಫೋನ್ ಪೇ -8971421052

ಹೆಚ್ಚಿನ ಮಾಹಿತಿಗೆ ಈ ನಂಬರ್ ಗೆ ಕರೆ ಮಾಡಿ : 8971421052, ಸಹಕರಿಸಿ.

ರಫಿ ರಿಪ್ಪನ್ ಪೇಟೆ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು