ವಿಜಯ ಸಂಘರ್ಷ
ಚಾಮರಾಜನಗರ (ಹನೂರು): ಸಾರ್ವಜನಿಕರು ಮಧ್ಯವರ್ತಿಗಳ ಮೊರೆ
ಹೋಗದೇ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳ ಕಛೇರಿಗೆ ತೆರಳಿ ಸೌಲಭ್ಯವನ್ನು ಪಡೆಯಬೇಕೆಂದು ಉಪ ತಹಶೀಲ್ದಾರ್ ನಾಗೇಂದ್ರ ತಿಳಿಸಿದರು.
ತಾಲ್ಲೂಕಿನ ಚೆನ್ನಾಲಿಂಗನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರು ಇಲಾಖೆಯಲ್ಲಿ ದೊರೆಯುವ ವಿವಿಧ ಪಿಂಚಣಿ ಸೌಲಭ್ಯಕ್ಕೆ ಸಲ್ಲಿಸಿರುವ ಅರ್ಜಿಗಳು ಹಾಗೂ ಪಹಣಿ ತಿದ್ದುಪಡಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ
ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿ ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು.ಕಾರ್ಯಕ್ರಮದಲ್ಲಿ ವೃಧ್ಯಾಪ ವೇತನ, ಅಂಗವಿಕಲ ವೇತನ, ವಿಧವೆ ವೇತನ ಸೇರಿದಂತೆ ಪಹಣಿ ತಿದ್ದುಪಡಿ ಇನ್ನಿತರೆ ಕಾರಣಗಳಿಗೆ ಸಾರ್ವಜನಿಕರು ಅರ್ಜಿಯನ್ನು ಸಲ್ಲಿಸಿದರು.
ಕಣ್ಣೂರು ಗ್ರಾ.ಪಂ.ಅಧ್ಯಕ್ಷ ಮಾದೇವ ಬಸವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಲೊಕ್ಕನಹಳ್ಳಿ ರಾಜಸ್ವ ನಿರೀಕ್ಷಕ ರಾಜು,ಗ್ರಾಮ ಲೆಕ್ಕಿಗಗರಾದ ಸಿ.ನಾಗರಾಜು, ಮಾದೇಶ್, ನಾಗೇಶ್,
ಗ್ರಾ.ಪಂ.ಸದಸ್ಯರುಗಳಾದ ರಾಜಣ್ಣ, ಅಫ್ರೋಜ್ ಖಾನ್,ರೈತ ಮುಖಂಡ ಮಂಜುನಾಥ್ ಸೇರಿದಂತೆ ಸಾರ್ವಜನಿಕರಿದ್ದರು.
ವರದಿ: ಪ್ರಭುಸ್ವಾಮಿ ಎಂ, ಹನೂರು.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795