ವಿಜಯ ಸಂಘರ್ಷ
ಭದ್ರಾವತಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧ ಖಂಡಿಸಿ ನಗರದಲ್ಲಿ ಇಂದು ಯುವ ಬ್ರಿಗೇಡ್ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
ಕೆಎಸ್‌ಆರ್‌ಸಿ ಮುಖ್ಯ ಬಸ್ ನಿಲ್ದಾಣದಿಂದ ಅಂಬೇಡ್ಕರ್ ವೃತ್ತದ ವರೆಗೂ ಮೇಣದ ಬತ್ತಿ ಹಚ್ಚಿ ಪಂಜಿನ ಮೆರವಣಿಗೆ ನಡೆಸಿ ಬಲಿಯಾಗಿರುವ ಅಮಾಯಕ ಹಿಂದೂಗಳ ಆತ್ಮಕ್ಕೆ ಶಾಂತಿ ಕೋರಲಾಯಿತು.
ರಾಮ ಸೇನಾ ಜಿಲ್ಲಾಧ್ಯಕ್ಷ ಉಮೇಶ್‌ಗೌಡ, ತಾಲೂಕು ಅಧ್ಯಕ್ಷ ಸಚಿನ್ ಎಂ. ವರ್ಣೇಕರ್, ಬಿಜೆಪಿ ಯುವ ಮುಖಂಡ ಧನುಷ್ ಬೋಸ್ಲೆ, ಯುವ ಬ್ರಿಗೇಡ್ ನ ಮೋಹನ್ ಕುಮಾರ್, ದರ್ಶನ್, ಸಂಜು, ಮಂಜುನಾಥ್, ಶ್ರೇಯಸ್, ಕೃಷ್ಣ, ಜೋಗಿ, ರಮೇಶ್, ಪ್ರಭು ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795