ವಿಜಯ ಸಂಘರ್ಷ
ಶಿವಮೊಗ್ಗ: ಹಾಸಿಗೆ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಘದವತಿಯಿಂದ ಇಂದು ಬೀದಿ ಬದಿ ವ್ಯಾಪಾರಸ್ಥ ಸಂಘದ ಜಿಲ್ಲಾಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಾಸಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ರಜಾಕ್ ಸಾಬ್ ನಗರದ ಗಲ್ಲಿಗಳಲ್ಲಿ, ಮನೆಮನೆಗಳಿಗೆ ಹೋಗಿ ಹಾಸಿಗೆ ರಿಪೇರಿ ಮಾಡಿಕೊಡುತ್ತೇವೆ, ಹಲವು ಭಾಗಗಳಲ್ಲಿ ಕಳ್ಳತನ, ಸುಲಿಗೆ ಘಟನೆಗಳ ನಡೆಯುತ್ತಿವೆ, ಗಸ್ತು ತಿರುಗುವ ಪೊಲೀಸ್ ಸಿಬ್ಬಂದಿಗಳು ತಡೆದು ವಿಚಾರಿಸುವರು. ಆಧಾರ್ ಕಾರ್ಡ್, ಪಾನ್ ಕಾರ್ಡ್, ಓಟರ್ ಐಡಿ, ಡಿಎಲ್ ಬಿಟ್ಟರೆ ವೃತ್ತಿಗೆ ಸಂಬಂಧಿಸಿದ ಯಾವುದೇ ಗುರುತಿನ ಚೀಟಿ ಇಲ್ಲ. ಮಹಾನಗರ ಪಾಲಿಕೆ ವತಿಯಿಂದ ಸಂಚಾರಿ ಹಾಸಿಗೆ ಕೆಲಸದ ಬೀದಿ ಬದಿ ಗುರುತಿನ ಚೀಟಿ ನೀಡಲು ಪಾಲಿಕೆ ಆಯುಕ್ತರಲ್ಲಿ ಮನವಿ ಮಾಡುವಂತೆ ಚನ್ನವೀರಪ್ಪ ಗಾಮನಗಟ್ಟಿ ರವರಲ್ಲಿ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಚನ್ನವೀರಪ್ಪ ಗಾಮನಗಟ್ಟಿ, ಇ-ಶ್ರಮ್, ಜನ್ ಧನ್, ಪೆನ್ಷನ್, ಆರೋಗ್ಯ ಕಾರ್ಡ್ ಹಾಗೂ ಇತರೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪಾಲಿಕೆ, ಆರೋಗ್ಯ ಇಲಾಖೆಗಳ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
ಹಾಸಿಗೆ ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಸಲೀಂಭಾಷಾ, ಅನ್ವರ್ ಭಾಷಾ,ಸಲೀಂ ಸಾಬ್ ಇನ್ನಿತರರಿದ್ದರು.
ಸಂಘದ ವತಿಯಿಂದ ಚನ್ನವೀರಪ್ಪ ಗಾಮನಗಟ್ಟಿ ರವರನ್ನು ಸನ್ಮಾನಿಸಿ ಗೌರವಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795