ವಿಜಯ ಸಂಘರ್ಷ
ಭದ್ರಾವತಿ : ನಗರದ ಹೊಸಸೇತುವೆ ರಸ್ತೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಆಚರಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಇ .ಮೋಹನ್ ಗೌಡ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಲೋಕ್ ಅದಾಲತ್ ನಿಂದ ಆಗುವ ಉಪಯೋಗಗಳನ್ನು ಕುರಿತು ಮಾಹಿತಿ ನೀಡಿದರು.
ವಕೀಲರ ಸಂಘದ ಕಾರ್ಯದರ್ಶಿ ಟಿ.ಎಸ್.ರಾಜು, ಎನ್. ರಂಗಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಶಾಖೆಯ ಅಧ್ಯಕ್ಷರು ಹಾಗೂ ವಿದ್ಯಾಸಂಸ್ಥೆಯ ಪದನಿಮಿತ್ತ ಅಧ್ಯಕ್ಷ ಬಿ ಸಿದ್ದಬಸಪ್ಪ, ಕಾರ್ಯದರ್ಶಿ ಎಂ.ಎಸ್ ಬಸವರಾಜ್, ಶಿವಾಜಿರಾವ್ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಆರ್ ಪಿ ಸುನೀತಾ, ಪ್ರತಿಭಾ, ಶಾಲಾ ಆಡಳಿತ ಮಂಡಳಿಯ ಎಸ್ . ಪಿ. ರಾಕೇಶ್, ಸಹಾಯಕ ಆಡಳಿತಧಿಕಾರಿ ಶಿವಲಿಂಗೇಗೌಡರು, ಪಿಯು ವಿಭಾಗಗಳ ಪ್ರಾಂಶುಪಾಲ ವರದರಾಜ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಶಿಕ್ಷಕರು, ವಿದ್ಯಾರ್ಥಿಗಳು,ಸಿಬ್ಬಂದಿ ವರ್ಗದವರು ಹಾಜರಿದ್ದರು.
ವಿದ್ಯಾ ಸಂಸ್ಥೆಯ ಸಂಸ್ಥಾಪಕ ಛೇರ್ಮನ್ ಬಿ. ಎಲ್.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿವಲಿಂಗೇಗೌಡ ಸ್ವಾಗತಿಸಿ, ಕವಿತ ಪ್ರಾರ್ಥಿಸಿದರೆ, ಉಪನ್ಯಾಸಕಿ ಶೋಭಾ ನಿರೂಪಿಸಿ, ಉಪನ್ಯಾಸಕಿ ವೀಣಾ ವಂದಿಸಿದರು.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795