ಗಾಜನೂರು ಸಂತೆಗೆ ಗಾಮನಗಟ್ಟಿ ಭೇಟಿ: ಸಮಸ್ಯೆಗಳಿಗೆ ಪರಿಹಾರಕ್ಕೆ ಸೂಚನೆ

 

ವಿಜಯ ಸಂಘರ್ಷ



ಶಿವಮೊಗ್ಗ :ತೀರ್ಥಹಳ್ಳಿ ರಸ್ತೆಯ ಗಾಜನೂರು ಸಂತೆ ವ್ಯಾಪಾರ ಸ್ಥಳಕ್ಕೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ  ಜಿಲ್ಲಾಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ಭೇಟಿ ನೀಡಿ ಸಂತೆ ಹಾಗೂ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಅಸಂಘಟಿತ ಶ್ರಮಿಕರಿಗೆ ಕೇಂದ್ರ ಸರ್ಕಾರದ ಇ-ಶ್ರಮ್, ಪಿಎಂ ಸ್ವ ನಿಧಿ ಕಿರು ಸಾಲ, ಪಿವೈ ಪೆಂಕ್ಷನ್ ಕ್ಷೀಂ ಮತ್ತಿತರೆ  ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಗುರುತಿನ ಚೀಟಿ ಪಡೆಯದೆ ಇರುವವರು ಈಗಲೇ ಬೀದಿ ಬದಿ ವ್ಯಾಪಾರದ ಗುರುತಿನ ಚೀಟಿಗಾಗಿ ಅರ್ಜಿ ಪಾಲಿಕೆಗೆ ನೀಡಿ ಎಂದು ಮಾಹಿತಿ ನೀಡಿದರು.

ವ್ಯಾಪಾರಸ್ಥ ವೃದ್ದ ಮಹಿಳೆಯೊಬ್ಬರು ನಾವು ಸಂತೆ ವ್ಯಾಪಾರಿಯಾಗಿದ್ಧು ಜಿಲ್ಲೆಯಲ್ಲಿ ಎಲ್ಲಾ ಸಂತೆಗಳಿಗೂ ಹೋಗಿ ವ್ಯಾಪಾರ ಮಾಡುತ್ತಿವಿ. ನಮಗೆ ಈ ಗುರುತಿನ ಚೀಟಿಯ ಬಗ್ಗೆ ಮಾಹಿತಿ ಇಲ್ಲಾ, ರವಿವರ್ಮ ಬೀದಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತೇವೆ. ಯಾವಾಗಲಾದರೂ ಒಮ್ಮೊಮ್ಮೆ ಸಂತೆಗಳಲ್ಲಿ ವ್ಯಾಪಾರ ಮಾಡುತ್ತೇವೆ. ಸರ್ಕಾರಿ ಸೌಲಭ್ಯಗಳ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಸಂಚಾರಿ ವ್ಯಾಪಾರಿಗಳಾಗಿದ್ದು, ತಮ್ಮ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಿರ ಹಾಗೂ ಸಂಚಾರಿ ವ್ಯಾಪಾರಿಗಳೆಂದು ಗುರುತಿನ ಚೀಟಿ ನೀಡುವರು. ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂತೆ ಬೀದಿ ಬದಿ ನೂರಾರು ವ್ಯಾಪಾರಿಗಳು ಭಾಗವಹಿಸಿದ್ದರು.

ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು