ವಿಜಯ ಸಂಘರ್ಷ
ಭದ್ರಾವತಿ: ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಂಡು ದುಶ್ಚಟಗಳಿಂದ ದೂರವಿರುವ ಮೂಲಕ ಬದುಕು ರೂಪಿಸಿಕೊಂಡಾಗ ಮಾತ್ರ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಡಾ. ಕೃಷ್ಣ ಎಸ್ ಭಟ್ ಹೇಳಿದರು.
ನಗರದ ಕೆಎಸ್ಆರ್ ಟಿ ಸಿ ಘಟಕದಲ್ಲಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತರರಿಗೆ ಹೋಲಿಕೆ ಮಾಡಿಕೊಳ್ಳುವ ಮನಸ್ಥಿತಿಗೆ ಹೊಂದಿಕೊಳ್ಳದೆ. ಇರುವುದರಲ್ಲಿಯೇ ಸಂತೃಪ್ತಿ ಪಡುವ ಮನೋಭಾವ ರೂಪಿಸಿಕೊಂಡು ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳನ್ನು ಎದುರು ನೋಡುವ ವಿಶ್ವಾಸಹೊಂದಿರ ಬೇಕು. ಯಾವುದೇ ಕಾರಣಕ್ಕೂ ಹತಾಶೆ, ನಿರಾಸೆಗಳಿಗೆ ಒಳಗಾಗಬಾರದು ಎಂದರು.
ಮನೋವೈದ್ಯ ಡಾ.ಹರೀಶ ದೇಲಂತ ಬೆಟ್ಟು ಮಾತನಾಡಿ, ಪ್ರತಿಯೊಬ್ಬರ ಕೆಲಸದಲ್ಲಿ ನಿಷ್ಠೆ ಮುಖ್ಯ. ಒತ್ತಡಗಳಿಗೆ ಮಣಿದು ಮದ್ಯ ಸೇವನೆಯ ವ್ಯಸನಕ್ಕೆ ಬಲಿಯಾಗಬಾರದು. ಪ್ರತಿದಿನ ನಡಿಗೆ, ಯೋಗ, ಪ್ರಾಣಯಾಮ,ವ್ಯಾಯಾಮ, ಧ್ಯಾನಕ್ಕೆ ಸಮಯ ಮೀಸಲಿಡಬೇಕೆಂ ದರು.
ಘಟಕದ ವ್ಯವಸ್ಥಾಪಕಿ ಅಂಬಿಕಾ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಪದಾಧಿಕಾರಿಗಳಾದ ಆದರ್ಶ, ರಾಘವೇಂದ್ರ ಉಪಾಧ್ಯಾಯ, ಬಿ.ಎಂ ಶಾಂತಕುಮಾರ್, ಸುಂದರ್‌ಬಾಬು, ಅಡವೀಶಯ್ಯ, ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು ಇದ್ದರು.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795