ವಿಜಯ ಸಂಘರ್ಷ
ಭದ್ರಾವತಿ: ಕವಿ ರಚಿತ ಕವನಗಳ ಅಕ್ಷರ ರೂಪವು ಓದುಗರನ್ನು ಆಕರ್ಷಿಸು ವಂತಿರಬೇಕು. ಬರಹಗಳು ಓದುಗರನ್ನು ಒಟ್ಟು ಗೂಡಿಸುವ ಕೆಲಸ ಕವಿಗಳಿಂದಾಗ ಬೇಕು ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಅವರು ನಗರದ ಜಯಶ್ರೀ ವೃತ್ತದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವೇದಿಕೆಯ ತಾಲ್ಲೂಕು ಶಾಖೆ ಏರ್ಪಡಿಸಿದ್ದ ದಸರಾ ಕವಿ ಗೋಷ್ಠಿಯ ಕಾರ್ಯಕ್ರಮದಲ್ಲಿ ಉದ್ಘಾಟನಾ ನುಡಿಗಳನ್ನಾಡಿದರು.
ಕಳೆದ ಎರಡು ವರ್ಷಗಳಿಂದ ಕೊರೋನಾ ಸಮಸ್ಯೆಗಳಿಂದ ಆತಂಕ ಎದುರಾಗಿದೆ.ಇಂತಹ ಸಂದರ್ಭದಲ್ಲಿ ಅನೇಕರನ್ನು ಕಳೆದುಕೊಂಡವರ ಆತಂಕ ಒಂದೆಡೆಯಾದರೆ, ಮತ್ತೊಂದೆಡೆ ಪರಸ್ಪರ ದುಃಖಿಸುವ ಕಾಲದಲ್ಲಿದ್ದೇವೆ ಎಂದು ವಿಷಾಧವ್ಯಕ್ತಪಡಿಸಿದರು.
ಕೊರೋನಾ ಸಂದರ್ಭದಲ್ಲಿ ಕನ್ನಡದ ಮನಸ್ಸುಗಳು ದೂರರಾಷ್ಟ್ರ ಅಮೇರಿಕಾ ದಂತಹ ರಾಷ್ಟ್ರಗಳನ್ನು ತಲುಪಿವೆ. ವೇದಿಕೆಯ ವತಿಯಿಂದ ಬೆರೆಯುವ ಮತ್ತು ಸಂಘಟಿಸುವ ಜವಾಬ್ದಾರಿ ಹೆಚ್ಚಾಗಿದೆ. ಇಂತಹ ಕಾರ್ಯವನ್ನು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮಾಡುತ್ತಿದೆ ಎಂದರು.
ತಾಲ್ಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇದೆ ಸಂದರ್ಭದಲ್ಲಿ ಪತ್ರಕರ್ತ ಆರ್.ವಿ. ಕೃಷ್ಣ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಉಪಾಧ್ಯಕ್ಷೆ ಎಂ.ಎಸ್. ಸುಧಾಮಣಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಸಿ.ಜಯಪ್ಪ ವೇದಿಕೆಯಲ್ಲಿದ್ದರು.
ವೇದಿಕೆಯ ಪದಾಧಿಕಾರಿಗಳಾದ ಎಂ.ಆರ್. ಮಂಜುನಾಥ, ಕಲಾವಿದ ಗುರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ಸ್ವಾಮಿ ಮುಂತಾವರಿದ್ದರು.
ಎಚ್.ಆರ್. ಸುಧಾ ಪ್ರಾರ್ಥಿಸಿದರೆ, ಟಿ.ಜಿ.ಬಾಬು ಸ್ವಾಗತಿಸಿ, ಪಿ.ಕೆ.ಸತೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸುಮಾರು 17 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ಸ್ವರಚಿತ ಕವನ ವಾಚಿಸಿದರು.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795