ಪ್ರಾದೇಶಿಕ ಪಕ್ಷದಿಂದ ಮಾತ್ರ ಕನ್ನಡಿಗರ ಅಭಿವೃದ್ಧಿ ಸಾಧ್ಯ: ಬೈರಪ್ಪ ಹರೀಶ್

 

ವಿಜಯ ಸಂಘರ್ಷ



ಶಿಕಾರಿಪುರ: ಕನ್ನಡನಾಡು,ನುಡಿ, ಜಲ ವಿಚಾರದಲ್ಲಿ ಕನ್ನಡಿಗರಿಗೆ ಪ್ರಾದೇಶಿಕ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ , ಅಕ್ಕ ಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಆಸ್ತಿತ್ವದಲ್ಲಿದ್ದು ತಮ್ಮ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರಕ್ಕೆ ಕೈ ಚಾಚುವುದಿಲ್ಲ ಎಂದು ಜನ ಅಧಿಕಾರ ಪಕ್ಷದ ರಾಜ್ಯಾಧ್ಯಕ್ಷ ಬೈರಪ್ಪ ಹರೀಶ್ ಕುಮಾರ್ ಹೇಳಿದರು.

ಪಟ್ಟಣದ ಮಯೂರ ಹೋಟೆಲ್ ಸಭಾಂಗಣದಲ್ಲಿ ಪಕ್ಷಕ್ಕೆ ನೂತನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು .

ನೂತನ ಪಕ್ಷದ ಉದ್ದೇಶದ ಕುರಿತು ಮಾತನಾಡಿದ ಅವರು ನಮ್ಮಲ್ಲಿ ಅಭಿಮಾನದ ಶೂನ್ಯತೆಯಿಂದ ಲೂಟಿ ಕೋರರ ಕೈಯಲ್ಲಿ ಅಧಿಕಾರ ನೀಡಿ ತಮ್ಮತನವನ್ನು ಮಾರಿಕೊಂಡು ಕೆಲಸ ಇಲ್ಲದೇ, ಅಭಿವೃದ್ಧಿಯೂ ಇಲ್ಲದೇ, ಒಗ್ಗಟ್ಟು ಇಲ್ಲದೇ ಇರುವಂತಾಗಿದೆ.

ಉತ್ತರ ಭಾರತದ ರಾಜಕೀಯ ಪಕ್ಷಗಳು ಪ್ರಾದೇಶಿಕ ಸಂಸ್ಕೃತಿಯ ವಿರೋಧಿ ಆಗಿದ್ದು ಹಿಂದಿ ಬಾಷೆಯನ್ನು ನಮ್ಮ ಮೇಲೆ ಹೇರ ಹೊರಟು ನಮ್ಮ ಮೇಲೆ ಅಧಿಕಾರ ಮಾಡುತ್ತಿದ್ದಾರೆ. ಕನ್ನಡಿಗರು ಇವರ ಕೈ ಕೆಳಗೆ ದುಡಿಯುವ ಆಗಾಗಿದೆ. ಮಹಾ ನಗರ ಬೆಂಗಳೂರು ಸೇರಿದಂತೆ ಹಲವು ಸಂಸ್ಥೆ, ಕಾರ್ಖಾನೆಗಳಲ್ಲಿ ಕೆಲಸ ಕೇಳಲು ಹೋದಲ್ಲಿ ಹಿಂದಿ ಇಂಗ್ಲಿಷ್ ಬಾಷೆ ಬರುತ್ತಾ ಎಂದು ಕೇಳುವ ಮೂಲಕ , ಕನ್ನಡಿಗರು ಸಣ್ಣ ಪುಟ್ಟ ಕೆಲಸಕ್ಕೆ ಮಾತ್ರ ಸೀಮಿತ ವಾಗಿದ್ದು, ಉನ್ನತ ಹುದ್ದೆಗಳು ಕನಸಾಗಿದೆ ಎಂದು ವಿಷಾಧವ್ಯಕ್ತ ಪಡಿಸಿದರು.

ಈ ಹಿನ್ನಲ್ಲೆಯಲ್ಲಿ ಯುವಕರು ಹಾಗೂ ಸಮಾನ ಮನಸ್ಕರು ನೂತನ ಪಕ್ಷಕ್ಕೆ ಸೇರ್ಪಡೆ ಆಗುವುದರ ಮೂಲಕ ಪ್ರಾದೇಶಿಕ ಪಕ್ಷಕ್ಕೆ ಬಲ ನೀಡಬೇಕೆಂದು ಮನವಿ ಮಾಡಿದರು.

ಈ ಸಂಧರ್ಭದಲ್ಲಿ ನೂರಾರು ಯುವಕರು ಪಕ್ಷಕ್ಕೆ ಸೇರ್ಪಡೆ ಯಾದರು. ಪಕ್ಷದ ಮುಖಂಡರಾದ ಮಂಜುನಾಥ್,ಪ್ರಭಾಕರ್,ಕುಶಾಲ್ , ಪ್ರಸಾದ್,ಯೋಗೀಶ್ , ಮಂಜಪ್ಪ  , ವಿಠ್ಠಲ, ರಮೇಶ್, ನಾಗರಾಜ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು