ವಿಜಯ ಸಂಘರ್ಷ
ಭದ್ರಾವತಿ : ವೈಜ್ಞಾನಿಕ ಮನೋ ಭಾವನೆ, ಸಂಘಟನೆ ದ್ಯೇಯೋ ದ್ದೇಶಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್
ಮಾಡುತ್ತಿದೆ ಎಂದು ತಾಲೂಕು ಶಾಖಾ ಧ್ಯಕ್ಷ ಸಿ ಜಯಪ್ಪ ಹೆಬ್ಬಲಗೆರೆ ಹೇಳಿದರು.
ನಗರದ ಜಯಶ್ರೀ ವೃತ್ತದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ತಾಲೂಕು ಶಾಖೆಯ ಪೂರ್ವ ಭಾವಿ ಸಭೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಜಾತಿ, ಧರ್ಮ, ಮೇಲು- ಕೀಳು ಎಂಬ ಬೇಧ ಭಾವ ತೋರಿ ಜನರನ್ನು ಹಾದಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಮೀಸಲಾತಿ, ಸಾಮಾಜಿಕ ನ್ಯಾಯ ಕಲ್ಪನೆಗಳ ನಡುವೆ ಕೆಲವಾರು ವಿಷಯಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಜಿಲ್ಲಾ ಉಪಾಧ್ಯಕ್ಷ ಕೊಗಲೂರು ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ನೇತೃತ್ವದಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಜೊತೆಗೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಲು ಉತ್ತಮ ಸಂಘಟನೆ ಮಾಡಲಾಗುತ್ತಿದೆ. ಪ್ರಥಮವಾಗಿ ಉಕ್ಕಿನ ನಗರದಲ್ಲಿ ಸಮಾನ ಮನಸ್ಕರು ಸೇರಿ ಸಂಘಟಿಸಲು ಉತ್ಸುಕರಾಗಿದ್ದಾರೆ. ಸಮಯ ಪರಿಪಾಲನೆಯಿಂದ ಸಂಘಟನೆಗಳನ್ನು ಬಲಪಡಿಸಲು ಸಾಧ್ಯ. ಆದ್ದರಿಂದ ಸಮಯಕ್ಕೆ ಪ್ರಾಧ್ಯಾನತೆ ನೀಡುವಂತೆ ಮನವಿ ಮಾಡಿದರು.
ಪರಿಷತ್ ನ ಉಮಾ, ಆದಿತ್ಯ ಶ್ಯಾಮ್, ಉಮ್ಮರ್ ಕೋಯಾ, ಗುರುಸಿದ್ದಪ್ಪ, ಈಶ್ವರಪ್ಪ, ರುದ್ರೇಶ್, ಆರ್.ವಿ.ಕೃಷ್ಣ ಭಾಗವಹಿಸಿದ್ದರು.
ಇಂದಿರಾ ಪ್ರಾರ್ಥಿಸಿ, ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರೆ, ಜ್ಯೋತಿ ವಂದಿಸಿದರು.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795