ಕೈ-ಕಮಲ ತೊರೆದು ತೆನೆ ಹೊತ್ತವರಿವರು.. !

 

ವಿಜಯ ಸಂಘರ್ಷ



ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾ.ಪಂ.ವ್ಯಾಪ್ತಿಯ ವಿವಿಧ ಕಾಡಂಚಿನ ಗ್ರಾಮಗಳ ನೂರಾರು ಜನತೆ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಆರ್.ಮಂಜು ನಾಥ್ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.

ಮಲೆಮಹದೇಶ್ವರ ಬೆಟ್ಟ ಸಾಲೂರು ಮಠದ ಸ್ಮಾರಕ ಭವನದ ಬಳಿ ಆಯೋಜಿಸಲಾಗಿದ್ದ ಪಕ್ಷ ಸೇರ್ಪಡೆ
ಕಾರ್ಯಕ್ರಮದಲ್ಲಿ ಮಲೆಮಹದೇಶ್ವರ ಬೆಟ್ಟದ ಯೂತ್ ಕಾಂಗ್ರೇಸ್‍ನ ಕಾರ್ಯದರ್ಶಿ ಹನುಮಂತು,
ಹುಚ್ಚೇಗೌಡ ವಿವಿಧ ಗ್ರಾಮಗಳ
ಗ್ರಾ.ಪಂ.ಸದಸ್ಯರುಗಳು ಸೇರಿದಂತೆ ವಿವಿಧ ಮುಖಂಡರುಗಳು ಮತ್ತು ಕಾರ್ಯಕರ್ತರನ್ನುಎಂ.ಆರ್.ಮಂಜುನಾಥ್ ಪಕ್ಷದ ಚಿಹ್ನೆಯುಳ್ಳ ಶಾಲನ್ನು ಹಾಕುವ ಮೂಲಕ ಆತ್ಮಿಯವಾಗಿ ಬರಮಾಡಿಕೊಂಡರು.

ಕಾರ್ಯಕ್ರಮದ ಅಂಗವಾಗಿ ಪಕ್ಷಕ್ಕೆ
ಸೇರ್ಪಡೆಗೊಂಡವರು ಹಾಗೂ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ. ಮಾತನಾಡಿ, ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ.ವ್ಯಾಪ್ತಿಯ ಮತದಾರರು ಕ್ಷೇತ್ರ
ವ್ಯಾಪ್ತಿಯ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 45 ಸಾವಿರ ಮತಗಳನ್ನು ನೀಡಿ ಆರ್ಶಿವದಿಸಿದ್ದಾರೆ. ಅವರ ಋಣ ತೀರಿಸುವುದು ನನ್ನ ಕರ್ತವ್ಯವಾಗಿದೆ. ದಿ.ಜಿ.ರಾಜೂಗೌಡರು ಮತ್ತು ದಿ.ಹೆಚ್.ನಾಗಪ್ಪ ಅವರ ತರುವಾಯ ಎರಡು ಮನೆತನದ ಹಾಲಿ ಶಾಸಕರು ಮತ್ತು ಮಾಜಿ ಶಾಸಕಿ ಅವರು ಜನತೆಯ ಕಷ್ಟವನ್ನು ಪರಿಹರಿಸುವ ಕೆಲಸ ಮಾಡಲಿಲ್ಲ. ಬದಲಾಗಿ ಅವರ ಮುಗ್ಧ, ಅಮಾಯಕ, ಅಭಿಮಾನವನ್ನು
ದುರಪಯೋಗಪಡಿಸಿಕೊಂಡು ನಿಕೃಷ್ಟವಾದ ಜೀವನ ಸಾಗಿಸುವಂತಾ ಗಿದೆ. ಮೂಲಭೂತ ಸೌಕರ್ಯಗಳು ಇಲ್ಲದೆ ಸ್ವಾತಂತ್ರ್ಯ ಪೂರ್ವದಂತೆ ಜೀವನ ಸಾಗಿಸುತ್ತಿದ್ದಾರೆ.ಇಲ್ಲಿನ ಕಾಡಂಚಿನ ಜನತೆಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದು ನನ್ನ ಭಾವನೆ. ಶಾಸಕರ ಸರ್ವಾಧಿಕಾರಿ ಧೋರಣೆಯಿಂದ ಜನತೆ ಬೇಸತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜನತೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮಟ್ಟವನ್ನು ಸುಧಾರಿಸಲು ನನಗೆ ಒಮ್ಮೆ ಅವಕಾಶ ನೀಡಿ. ನಿಮ್ಮ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಇಲ್ಲವಾದರೇ ನನ್ನನ್ನು ತಿರಸ್ಕರಿಸಿ.
ಈ ಭಾಗದಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಒದಗಿಸಲು ಪ್ಯಾಕ್ಟರಿಗಳನ್ನು ನಿರ್ಮಾಣ
ಮಾಡುವ ಮಹಾದಾಸೆ ಇದೆ. ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹೆಚ್ಚಿನ
ಸಂಖ್ಯೆಯಲ್ಲಿ ಗೆಲ್ಲಿಸಲು ತಳಮಟ್ಟದಿಂದ
ಶ್ರಮಿಸಬೇಕು. ಪಕ್ಷದ  ಪ್ರಾಥಮಿಕ ಸದಸ್ಯತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡುವ ಮೂಲಕ ಪಕ್ಷ
ಸಂಘಟನೆಯನ್ನು ಮಾಡಬೇಕೆಂದ ಅವರು ಪಕ್ಷದ ತತ್ವ ಸಿದ್ದಾಂತ ಹಾಗೂ ನನ್ನ ಕಾರ್ಯವೈಖರಿಯನ್ನು ಮೆಚ್ಚಿ ಪಕ್ಷಕ್ಕೆ ಆಗಮಿಸಿರುವ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.

ಪಕ್ಷತೊರೆದ ಯೂತ್ ಕಾಂಗ್ರೇಸ್
ಕಾರ್ಯದರ್ಶಿ ಮ.ಮ.ಬೆಟ್ಟ ಮಾತನಾಡಿ, ಶಾಸಕ ಆರ್.ನರೇಂದ್ರ ಅವರ ಆಡಳಿತ ಧೋರಣೆ, ಕಾರ್ಯ ಕರ್ತರು ಮತ್ತು ಮುಖಂಡರ ಕಡೆಗಣನೆಯಿಂದ ಬೇಸತ್ತು ಮಂಜುನಾಥ್ ಅವರ ಕಾರ್ಯ ವೈಖರಿಯನ್ನು ಮೆಚ್ಚಿ ಪಕ್ಷಕ್ಕೆ
ಸೇರ್ಪಡೆಗೊಂಡಿದ್ದೇನೆ. ಶಾಸಕರು ಬೀದಿಬದಿ ವ್ಯಾಪಾರಿಗಳ
ಸಮಸ್ಯೆ ಸೇರಿದಂತೆ ಇನ್ನಿತರೆ ಮೂಲಭೂತ
ಸಮಸ್ಯೆಗಳನ್ನು ಹೇಳಲು ಹೋದರೆ
ಸ್ಪಂದಿಸುವುದಿಲ್ಲ. ಹೆಚ್ಚು ಮಾತನಾಡಿದರೆ ನಿಮ್ಮ ಬೆಟ್ಟದ
ಮತಗಳು ನನಗೆ ಬೇಡ ಹೋಗಿ ಎನ್ನುತ್ತಾರೆ. ಇಂದು
ಮ.ಮ.ಬೆಟ್ಟಕ್ಕೆ ಬೇಟಿ ನೀಡಿ ಪಕ್ಷ
ಸೇರ್ಪಡೆಗೊಳ್ಳುವುದನ್ನು ತಡೆಯಲು
ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು
ಶ್ರಮಿಸಿದ ಡಿ.ಕೆ.ರಾಜು, ಹಾಗೂ ಹನುಮಂತು ಸೇರಿದಂತೆ
ವಿವಿಧ ಮುಖಂಡರಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಮಾಜಿ
ಸದಸ್ಯ ಶಾಗ್ಯ ನಾಗೇಂದ್ರ ಬಾಬು, ಸಿಂಗನಲ್ಲೂರು ರಾಜಣ್ಣ,
ಹನೂರು ಮಂಜೇಶ್, ಸತ್ತೇಗಾಲ ಪ್ರಭು, ಎಲ್ಲೇಮಾಳ ಸಿದ್ದಪ್ಪ, ಪಾಪಣ್ಣ ಸೇರಿದಂತೆ ಜಿಲ್ಲಾ ಮಟ್ಟದ
ಮುಖಂಡರುಗಳು, ಮ.ಮ.ಬೆಟ್ಟ ಗ್ರಾ.ಪಂ.ವ್ಯಾಪ್ತಿಯ ವಿವಿಧ ಗ್ರಾ.ಪಂ.ಸದಸ್ಯರು, ಮುಖಂಡರು,
ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಪ್ರಭುಸ್ವಾಮಿ ಎಂ, ಹನೂರು.

ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು