ವಿಜಯ ಸಂಘರ್ಷ
ಭದ್ರಾವತಿ: ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಹಾಗೂ ಉಪ ಆರೋಗ್ಯ ಕೇಂದ್ರದ ವತಿಯಿಂದ ಇಂದು ಗ್ರಾಮದಲ್ಲಿ ಕೋವಿಡ್- 19 ಲಸಿಕೆ ಅಭಿಯಾನ ಸಮುದಾಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸರ್ಕಾರದಿಂದ ಹಲವು ಬಾರಿ ಅಭಿಯಾನ ನಡೆಸಿರುವುದರಿಂದ ನಿರೀಕ್ಷಿತ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳದ ಕಾರಣ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ಮಾಡಿ ವ್ಯಾಕ್ಸಿನ್ ಪಡೆಯಲು ಮನವಿ ಮಾಡಿಕೊಂಡರು.
ಚುನಾಯಿತ ಪ್ರತಿನಿಧಿಗಳು, ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸೇರಿ ಗ್ರಾಮದ ಹಾವು ಗೊಲ್ಲರ ಕ್ಯಾಂಪ್ ನಲ್ಲಿ ಸಾರ್ವಜನಿಕರು ಲಸಿಕೆಯ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಿ ವ್ಯಾಕ್ಸಿನ್ ನೀಡಲಾಯಿತು. ನಂತರ ಗ್ರಾಮದ ಮನೆಗಳಿಗೆ ತಂಡ ಭೇಟಿ ನೀಡಿ ತಾಂಡಾದ ಮಹಿಳೆಯರಿಗೆ ವ್ಯಾಕ್ಸಿಂಗ್ ಬಗ್ಗೆ ಮಾಹಿತಿ ನೀಡಿ ವ್ಯಾಕ್ಸಿನ್ ನೀಡಲಾಯಿತು.
ಅರಬಿಳಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ: ಗಿರೀಶ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಹಾಗೂ ಸಿಬ್ಬಂದಿ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಆಶಾ ಕಾರ್ಯಕರ್ತ ರು ಭಾಗವಹಿಸಿದ್ದರು. ಒಟ್ಟು 117 ಜನ ಲಸಿಕೆ ಪಡೆದರೆ, 18 ರಿಂದ 44 ವಯೋಮಿತಿಯ ಮೊದಲನೇ ಡೋಸ್ 69 ಜನ ಪಡೆದರು. 14 ಜನ ಎರಡನೇ ಡೋಸ್ ಪಡೆದರು. 45 ರಿಂದ 59 ವಯೋಮಿತಿಯ ಮೊದಲನೇ ಡೋಸ್ 16 ಜನ ಪಡೆದರೆ, ಎರಡನೇ ಡೋಸ್ 12 ಜನ ಪಡೆದರು, 60 ವರ್ಷ ಮೇಲ್ಪಟ್ಟ ವಯೋಮಿತಿಯ ಮೊದಲನೇ ಡೋಸ್ 5 ಜನ ಪಡೆದರೆ, ಎರಡನೇ ಡೋಸ್ ಒಬ್ಬರು ಪಡೆದರು.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795