ಶಿವಮೊಗ್ಗ ದಸರಾ ಚಲನ ಚಿತ್ರೋತ್ಸವ ಉದ್ಘಾಟನೆ

 

ವಿಜಯ ಸಂಘರ್ಷ



ಶಿವಮೊಗ್ಗ: ನಗರದ ಹೆಚ್.ಪಿ.ಸಿ ಚಲನಚಿತ್ರ ಮಂದಿರದಲ್ಲಿಂದು ದಸರಾ ಚಲನ ಚಿತ್ರೋತ್ಸವ-2021 ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಗೀತ ನಿರ್ದೇಶಕ ವಿ.ಮನೋಹರ್, ಕಿರುತೆರೆಯ ಧಾರವಾಹಿಯ ಒಂದು ಎಪಿಸೋಡು ಒಂದು ಚಲನಚಿತ್ರ ನಿರ್ಮಾಣಕ್ಕೆ ಸಮಾನ. ಚಲನಚಿತ್ರಕ್ಕಿಂತ ಕಿರುತೆರೆಯನ್ನ ನಿರ್ಮಿಸುವುದು  ಚಾಲೆಂಜಿಂಗ್ ಸಹ ಹೌದು. ಚಲನಚಿತ್ರವನ್ನ ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬಂದು ನೋಡಬೇಕು ಎಂದು ಮನವಿ ಮಾಡಿದರು.

ಚಿತ್ರ ನಟಿ ವೀಣಾ ಸುಂದರ್ ಮಾತನಾಡಿ ಮೈಸೂರು ದಸರಾದಲ್ಲಿ ಭಾಗವಹಿಸಿದ್ದೇನೆ. ಆದರೆ ನಮ್ಮನ್ನ ಮತ್ತು ಪತಿ ಸುಂದರ್ ರವರನ್ನ ಒಂದೇ ವೇದಿಕೆ ಮೇಲೆ ಕೂರುವಂತೆ ಮಾಡಿರುವುದು ಶಿವಮೊಗ್ಗ ದಸರಾ ಎಂದು ಸಂತಸ ವ್ಯಕ್ತಪಡಿಸಿದರು.

ಕಲಾವಿದ ಸುಂದರ್ ಮನೋರಂಜನೆ ನಮ್ಮ ಕೊನೆಯ ಆಯ್ಕೆಯಾಗಿರುತ್ತದೆ. ಈ ಕೊನೆಯ ಆಯ್ಕೆಗೆ ಕೊರೋನ ಎಂಬ ಮಹಾಮಾರಿಯಿಂದ ದುಡಿಮೆ ಇಲ್ಲದಂತಾಗಿದೆ. ಪ್ರೇಕ್ಷಕರು  ಚಲನಚಿತ್ರ ಮಂದಿರಕ್ಕೆ ಬಂದು ವೀಕ್ಷಿಸಿ ಕಲಾವಿದರ ಬೆನ್ನು ತಟ್ಟುವಂತೆ ಮನವಿ ಮಾಡಿದರು.

ವಾಸುಕಿ ವೈಭವ್,  ನನ್ನ ಊರು ಶಿವಮೊಗ್ಗ, ನನ್ನ ತಂದೆ ಹುಟ್ಟಿದ ಊರು ಹಾಗಾಗಿ ನಾನು ಸಹ ಮಲೆನಾಡಿನ ಹುಡುಗ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಬೆಳ್ಳಿಮಂಡಲದ ಡಿ.ಎಸ್ ಅರುಣ್, ಹೆಚ್ ಪಿಸಿ ಚಲನಚಿತ್ರ ಮಂದಿರದ ಮಾಲೀಕ ಪಂಚಾಕ್ಷರಿ ಆಯುಕ್ತ ಚಿದಾನಂದ ವಟಾರೆ, ಪತ್ರಕರ್ತ ವೈದ್ಯ ಮೊದಲಾದವರು ಉಪಸ್ಥಿತರಿದ್ದರು.

ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು