ಬಿಜೆಪಿ ಮುಖಂಡ ಬಿ.ವೆಂಕಟೇಶ್ ರಿಂದ ಗಾಯಳು ಕುಟುಂಬಸ್ಥರ ಭೇಟಿ : ಸಾಂತ್ವನ

 

ವಿಜಯ ಸಂಘರ್ಷ



ಚಾಮರಾಜನಗರ: ತಮಿಳುನಾಡಿನ ಸೇಲಂ ವೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಲೂಕಿನ ಪೊನ್ನಾಚಿ ಗ್ರಾಮದ ಗಾಯಾಳು ಗಳನ್ನು ಜನಾಶ್ರಯ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬಿ.ವೆಂಕಟೇಶ್ ಭೇಟಿ ಮಾಡಿ ಕುಟುಂಬಸ್ಥರಿಗೆ ಸಾಂತ್ವನದ ಜೊತೆಗೆ ಧೈರ್ಯ ತುಂಬಿದರು.



ತಾಲೂಕಿನ ಪೊನ್ನಾಚಿ ಗ್ರಾಮದ ಒಂದೇ ಕುಟುಂಬದ ಮಗು ಸೇರಿದಂತೆ ಐವರು ಅ.20 ರಂದು ಕಾರ್ಯ ನಿಮಿತ್ತ ತಮಿಳುನಾಡಿನತ್ತ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಪಾಲಾರ್ ಬಳಿ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಮಗುಚಿ ಬಿದ್ದು, ಮಗು ಸ್ಥಳದಲ್ಲಿಯೇ ಮೃತಪಟ್ಟಿತ್ತು. ಕಾರಿನಲ್ಲಿದ್ದ ನಾಗಮ್ಮ, ಲಕ್ಷ್ಮೀ ಹಾಗೂ ಮಹದೇವ ಎಂಬವರು ಗಾಯ ಗೊಂಡು ತಮಿಳುನಾಡಿನ ಸೇಲಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ವಿಷಯ ತಿಳಿದ ಟ್ರಸ್ಟ್ ಸಂಸ್ಥಾಪಕ ಬಿ.ವೆಂಕಟೇಶ್  ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿ ಕುಟುಂಬಸ್ಥರಿಗೆ ಯಾವುದೇ ಕಾರಣಕ್ಕೂ ಎದೆಗುಂದಬೇಡಿ ಎಂದು ಧೈರ್ಯ ತುಂಬಿದರು.

ವೈದ್ಯರ ಜತೆ ಚರ್ಚಿಸಿ ಗಾಯಗೊಂಡಿರುವವರಿಗೆ ಆದಷ್ಟು ಬೇಗ ಗುಣಪಡಿಸಬೇಕು, ಅದಕ್ಕಾಗಿ ಅವರಿಗೆ ಯಾವುದೇ ರೀತಿಯ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಶೀಘ್ರವೇ    ಚಿಕಿತ್ಸೆ ಕೊಡಿ, ಅವರ ನೆರವಿಗೆ ನಾನು ಇದ್ದೇನೆ ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡರು .

ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಹಾಜರಿದ್ದರು

ವರದಿ: ಪ್ರಭುಸ್ವಾಮಿ ಎಂ, ಹನೂರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು