ವಿಜಯ ಸಂಘರ್ಷ
ಭದ್ರಾವತಿ: ತಾಲೂಕು ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಎನ್ ಶ್ರೀಹರ್ಷ ಆಯ್ಕೆಯಾಗಿದ್ದಾರೆ.
ಎರಡು ವರ್ಷ ಅವಧಿಯ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್ ಶ್ರೀಹರ್ಷ ಹಾಗು ಬಿ.ಸಿ ಕೇಶವಮೂರ್ತಿ ಸ್ಪರ್ಧಿಸಿದ್ದು, ಈ ಪೈಕಿ ಹರ್ಷ 98 ಮತಗಳನ್ನು ಹಾಗು ಕೇಶವಮೂರ್ತಿ 80 ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು 18 ಮತಗಳ ಅಂತರದಿಂದ ಹರ್ಷ ಗೆಲುವು ಸಾಧಿಸಿದ್ದಾರೆ.
ಉಳಿದಂತೆ ಉಪಾಧ್ಯಕ್ಷರಾಗಿ ಡಿ.ಎಂ ವಿಶ್ವನಾಥ್, ಕಾರ್ಯದರ್ಶಿಯಾಗಿ ಉದಯಕುಮಾರ್ ಮತ್ತು ಜಂಟಿ ಕಾರ್ಯದರ್ಶಿಯಾಗಿ ಮಂಜಪ್ಪ ಆಯ್ಕೆಯಾಗಿದ್ದಾರೆ.ಒಟ್ಟು 185 ಸದಸ್ಯರ ಪೈಕಿ 178 ಸದಸ್ಯರು ಮತ ಚಲಾಯಿಸಿದರು. ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು.
ಚುನಾವಣಾಧಿಕಾರಿಗಳಾಗಿ ವಕೀಲರಾದ ಸೈಯದ್ ನಿಯಾಜ್, ಉಮಾಶಂಕರ್ ಹಾಗೂ ಕೂಡ್ಲಿಗೆರೆ ಮಂಜುನಾಥ್ ಕರ್ತವ್ಯ ನಿರ್ವಹಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795