ಕಾಲಘಟ್ಟಕ್ಕೆ ತಕ್ಕಂತೆ ಅಂಚೆ ಇಲಾಖೆ ಹೊಂದಿಕೊಳ್ಳು ತ್ತಿದೆ: ಸಿ.ಎಂ ತ್ಯಾಗರಾಜ್

 

ವಿಜಯ ಸಂಘರ್ಷ



ಭದ್ರಾವತಿ: ಬದಲಾಗುತ್ತಿರುವ ಕಾಲಕ್ಕೆ ಸರಿಯಾಗಿ ಅಂಚೆ ಇಲಾಖೆಯೂ ಸಹ ಹೊಂದಿಕೊಳ್ಳುತ್ತಿದ್ದು, ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಆಡಳಿತಾ ಧಿಕಾರಿ ಪ್ರೊ. ಸಿ.ಎಂ ತ್ಯಾಗರಾಜ್ ಹೇಳಿದರು.

ನಗರದ ಪ್ರಧಾನ ಅಂಚೆ ಕಛೇರಿಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಅಂಚೆ ಸಪ್ತಾಹ ಉದ್ಘಾ ಟಿಸಿ ಅವರು ಮಾತನಾಡಿದರು.



 ಬ್ಯಾಂಕಿಂಗ್, ಜೀವವಿಮಾ ಸೇರಿದಂತೆ ಹಲವು ರೀತಿಯ ಸೇವೆಗಳನ್ನು ಸಹ ಅಂಚೆ ಇಲಾಖೆ ತನ್ನ ವ್ಯಾಪ್ತಿಗೆ ಸೇರ್ಪಡೆ ಮಾಡಿಗೊಳ್ಳುವ ಜೊತೆಗೆ ಉತ್ತಮವಾಗಿ ನಿರ್ವಹಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.  ಅಂಚೆ ಇಲಾಖೆ ಸಿಬ್ಬಂದಿಗಳು ಕಾರ್ಯ ನಿರ್ವಹಣೆಯಲ್ಲಿ ಇನ್ನೂ ಹೆಚ್ಚಿನ ಗಮನ ಹರಿಸಬೇಕು. ಸಾರ್ವಜನಿಕ ವಲಯಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಹೊಸ ಹೊಸ ಅವಿಷ್ಕಾರ ಗಳು ನಡೆಯಬೇಕೆಂದರು.

'ಡಿ' ಗ್ರೂಪ್ ನೌಕರರ ವಿಭಾಗದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಣೆಯಲ್ಲಿ ದಾನಿಷ್ ಪಟೇಲ್,  ಅತ್ಯುತ್ತಮ ವಿಲೇವಾರಿಗಾಗಿ ಪೋಸ್ಟ್ ಮ್ಯಾನ್ ವಿಭಾಗದಲ್ಲಿ ಎಚ್.ವಿ ರಾಜ್‌ ಕುಮಾರ್, ಎಚ್. ಗೀತಾ, ಪೋಸ್ಟ್‌ಮ್ಯಾನ್ ವಿಭಾಗದ ಅಂಚೆ ವಿಂಗಡಣೆಯಲ್ಲಿ ಡಿ. ಗೋವಿಂದ ರಾಜು, ಹೆಚ್ಚಿನ ಆರ್ಥಿಕ ನಿರ್ವಹಣೆ ಯಲ್ಲಿ ಉದಯಚಾರ್, ಎಚ್. ಮಂಜುನಾಥ್, ಉತ್ತಮ ಹಾಜರಾತಿ ಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ವಿಭಾಗದಲ್ಲಿ ವಿದ್ಯಾ ಕೃಷ್ಣ ಮತ್ತು ಬಿ.ಸಿ ರಾಘವೇಂದ್ರ, ಉತ್ತಮ ಎನ್‌ಎಸ್‌ಸಿ ಏಜೆಂಟ್ ಎಸ್.ಕೆ ಗಣೇಶ್ ಮತ್ತು ಆರ್.ಡಿ ಏಜೆಂಟ್ ಲಕ್ಷ್ಮಮ್ಮ ಬಹುಮಾನಗಳನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ  ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ವಿ. ಶಶಿಧರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಂಚೆ ಅಧೀಕ್ಷಕ ಜಿ. ಹರೀಶ್, ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಅನಿಲ್‌ಕುಮಾರ್, ಅಂಚೆ ನಿರೀಕ್ಷಕ ಪ್ರಹ್ಲಾದನಾಯಕ್, ವಿಜಯಕುಮಾರ್, ನಾಗರಾಜ್, ಎಂ. ಪೂಜಾರ್ ಮತ್ತಿತರರಿದ್ದರು.

ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು