ವಿಜಯ ಸಂಘರ್ಷ
ಹನೂರು: ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ
ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ
ರಕ್ಷಣೆ ಹಾಗೂ ಭ್ರಷ್ಟಚಾರ ನಿರ್ಮೂ ಲನಾ ಸಮಿತಿ ವತಿಯಿಂದ ಕುರಟ್ಟಿ ಹೊಸೂರು ಗ್ರಾ.ಪಂ. ಮುಂಭಾಗ
ಧರಣಿ ಸತ್ಯಾಗ್ರಹ ನಡೆಸಲಾಯಿತು.
ಸಮಿತಿಯ ರಾಜ್ಯಾಧ್ಯಕ್ಷೆ ಲಕ್ಷ್ಮಿ ಮಹೇಶ್ ಅವರ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಗಳನ್ನು
ಒದಗಿಸದೇ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳು ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಯ ಅಧ್ಯಕ್ಷೆ ಲಕ್ಷ್ಮಿ ಮಹೇಶ್ ಮಾತನಾಡಿ, ಕುರಟ್ಟಿ ಹೊಸೂರು ಗ್ರಾ.ಪಂ. ಕೇಂದ್ರ ಸ್ಥಾನದಲ್ಲಿ ಮೂಲ ಭೂತ ಸಮಸ್ಯೆಗಳು ತಾಂಡವಾಡು ತ್ತಿದ್ದು, ಇಲ್ಲಿನ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಉತ್ತಮ ರಸ್ತೆ,
ಚರಂಡಿ ಇಲ್ಲ, ಅನೈರ್ಮಲ್ಯ ಕೂಡಿ ರುವ ಸ್ಥಳದಲ್ಲಿ ಜೀವನ ದೂಡ ಬೇಕಾಗಿದೆ. ಇಲ್ಲಿನ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರಾ.ಪಂ.ಗೆ ಬರುವ ಅನುದಾನದಲ್ಲಿ
ದುರ್ಬಳಕೆ ಆಗಿದೆ. ಅನುದಾನ ಬಳಕೆ ಆಗಿರುವ ಬಗ್ಗೆ ಮಾಹಿತಿ ನೀಡಬೇಕು. ಯಂತ್ರೋಪಕರಣಗಳ ಮೂಲಕ
ಮನರೇಗಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.
ಜಾಬ್ ಕಾರ್ಡ್ ಇರುವವರ ಖಾತೆಗೆ ಕೂಲಿ ಹಣ ಹಾಕಿಸಿ ಅವರಿಗೆ
ಐನೂರು ಸಾವಿರ ಹಣವನ್ನು ನೀಡಿ ಉಳಿದ ಹಣವನ್ನು ಕಾಮಗಾರಿ
ಕೈಗೊಂಡವರು ನುಂಗುತ್ತಾರೆ. ಕೂಲಿ ನೀಡದ ಹಿನ್ನಲೆಯಲ್ಲಿ ಇಲ್ಲಿನ ಜನ ನಗರ ಪ್ರದೇಶಗಳಿಗೆ ತೆರಳುವಂತೆ ಆಗಿದೆ. ಅಂಗನವಾಡಿ ಕೇಂದ್ರ ಸಮೀಪದಲ್ಲೇ ಚರಂಡಿ ನೀರು ಹಾದು ಹೋಗುತ್ತಿದ್ದು, ಸಿಡಿಪಿಒ ಸೇರಿದಂತೆ
ಇನ್ನಿತರೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು
ಆರೋಪಿಸಿದರು.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಲು ಪಟ್ಟು:
ಮೂಲಭೂತ ಸೌಕರ್ಯಗಳನ್ನು ಬಗೆಹರಿಸುವ ದಿಸೆಯಲ್ಲಿ
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದ ಪ್ರತಿಭಟನಾ ನಿರತರು
ಮಧ್ಯಾಹ್ನದವರೆಗೆ ಧರಣಿ ನಡೆಸಿದರು.
ತಾ.ಪಂ. ಸಹಾಯಕ ಕಾರ್ಯನಿರ್ವ ಹಣಾಧಿಕಾರಿ ರವೀಂದ್ರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಆಲಿಸಿದರು. ಈ ವೇಳೆ
ಸಮಿತಿಯ ಅಧ್ಯಕ್ಷೆ ಲಕ್ಷ್ಮಿ ಮಹೇಶ್
ಗ್ರಾ.ಪಂ.ಅಧಿಕಾರಿಗಳ ವಿರುದ್ಧ ಖಾರವಾಗಿ ಟೀಕಿಸಿದರು.
ಬಳಿಕ ತಾಲ್ಲೂಕು ಪಂಚಾಯಿತಿ ಎ.ಡಿ.ರವೀಂದ್ರ ಅವರು
ಸಮಿತಿಯ ಮನವಿಯನ್ನು ಪುರಸ್ಕರಿಸಿ ಈ ಸಂಬಂಧ ಕ್ರಮ ಜರುಗಿಸಲಾಗು ವುದು. ನಾಳೆಯಿಂದಲೇ ಹಂತ ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ
ವಹಿಸಲಾಗುವುದು ಇದಕ್ಕೆ 10 ರಿಂದ 15 ದಿನಗಳ ಕಾಲಾವಕಾಶ ನೀಡಬೇಕೆಂದು ಪ್ರತಿಭಟನಾ ನಿರತರರಿಗೆ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನಾ ನಿರತರು
ಮನವಿ ಪತ್ರವನ್ನು ತಾಲ್ಲೂಕು ಪಂಚಾಯಿತಿ ಎ.ಡಿ.ರವೀಂದ್ರ
ಅವರಿಗೆ ನೀಡಿದರು.
ರಾಮಾಪುರ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ಪ್ರಸಾದ್ ನೇತೃತ್ವದ ತಂಡ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಚಾರ ನಿರ್ಮೂಲನಾ
ಸಮಿತಿಯ ಫಿಲೋಮಿಯ, ಜಡೇಸ್ವಾಮಿ,ಬಿ.ವೆಂಕಟರಾಜು,ವಲಸಲ, ಲಕ್ಷ್ಮಿಕಾಂತ್, ಅಂಬರೀಶ್, ರಾಮಣ್ಣ, ಕೆ.ವೆಂಕಟೇಶ್
ಇನ್ನಿತರರು ಇದ್ದರು.
ವರದಿ: ಪ್ರಭುಸ್ವಾಮಿ ಎಂ, ಹನೂರು.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795