ವಿಜಯ ಸಂಘರ್ಷ
ಭದ್ರಾವತಿ: ನಗರದ ಕಡದಕಟ್ಟೆಯ ನವಚೇತನ ಕನ್ನಡ ಮತ್ತು ಆಂಗ್ಲ ಹಾಗೂ ಕೆ.ಜಿ.ಆರ್ ಶಾಲೆಯ ವತಿಯಿಂದ 66 ನೇ ಕನ್ನಡ ರಾಜ್ಯೋತ್ಸವವನ್ನು ಪುನೀತ್ ರಾಜಕುಮಾರ್ ರವರ ಶೋಕಚರಣೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಮಕ್ಕಳು ರಾಷ್ಟ್ರಕವಿ ಕುವೆಂಪು ರವರ ಬಾರಿಸು ಕನ್ನಡ ಡಿಂಡಿಮವ,ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ನಿತ್ಯೋತ್ಸವ ಕವಿ ಕೆ,ಎಸ್, ನಿಸಾರ್ ಅಹಮದ್ ರವರ ಜೋಗದ ಸಿರಿ ಬೆಳಕಿನಲ್ಲಿ ಹಾಡನ್ನು ಸಾಮೂಹಿಕ ವಾಗಿ ಹಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೇರಳ ಸಮಾಜಂ ನಲ್ಲಿ
ಕೇರಳ ಸಮಾಜಂ ಕಚೇರಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೇರವೇರಿಸಲಾಯಿತು.
ಸಮಾಜದ ಅಧ್ಯಕ್ಷ ಗಂಗಾಧರ್, ಪದಾಧಿಕಾರಿಗಳಾದ ಜಿ. ಸುರೇಶ್, ಎ.ಚಂದ್ರಶೇಖರ, ಆರ್. ರಾಧಾೃಷ್ಣನ್, ಕೆ. ಸಿ. ರಾಜಶೇಖರ್, ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮಿ, ರೇಖಾ ಚಂದ್ರನ್, ಪ್ರೇಮ ವೇಲಾಯುದನ್, ಯಶೋದ ಮತ್ತು ಶೈಲಜ ಸುರೇಶ್ ಇದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795