ಕಾಮಸಮುದ್ರ ಗ್ರಾಮದಲ್ಲಿ ಕಾನೂನು ಅರಿವು-ನೆರವು

 

ವಿಜಯ ಸಂಘರ್ಷ



ಕೋಲಾರ (ಬಂಗಾರಪೇಟೆ): ಜನಸಾಮಾನ್ಯರ ದಿನನಿತ್ಯದ ಜೀವನದಲ್ಲಿ ಹಲವು ಕಾನೂನುಗಳನ್ನು ತಿಳಿದುಕೊಳ್ಳುವ ಮೂಲಕ ಎದುರಾಗಬಹುದಾದ ಹಲವು ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು ಎಂದು ಜೆ.ಎಂ.ಎಪ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಸಿ.ದೀಪು ಹೇಳಿದರು.

ಅವರಿಂದು ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಣ್ಣಪುಟ್ಟ ಪ್ರಕರಣಗಳಿಗೂ ನ್ಯಾಯಾಲಯದ ಕದ ತಟ್ಟುವುದು ಸಾಮಾನ್ಯವಾಗಿದೆ, ನಂತರ ಪಶ್ಚತಾಪ  ಪಡುವುದರಿಂದ ಯಾರಿಗೂ ಲಾಭವಿಲ್ಲ,ಇದರಿಂದ  ಕಾನೂನು ಜ್ಞಾನವಿದ್ದರೇ ಎಷ್ಟೋ ಕಾನೂನು ತೊಡಕುಗಳನ್ನು ಬಗೆ ಹರಿಸಕೊಳ್ಳ ಬಹುದು ಎಂದರು.

ತಾ.ಪ ಇ.ಓ ವೆಂಕಟೇಶಪ್ಪ ಮಾತನಾಡಿ ಸರಕಾರ ಹಾಗೂ ನ್ಯಾಯಾಲಯಗಳು  ಕಾನೂನಿನ ಬಗ್ಗೆ ಹಳ್ಳಿಯ ಜನರಿಗೆ ಜಾಗೃತಿ ಮೂಡಿಸಲು ಕಟ್ಟಕಡೆಯ ಹಳ್ಳಿಗಳ ಕಡೆ ಬಂದು ಕಾನೂನು ವಿಚಾರ ತಿಳಿಸುತ್ತಿದ್ದು ಸದುಪಯೋಗ ಪಡಿಸಿಕೊಳ್ಳಿ ಎಂದರು.

ವಕೀಲ ಕೆ.ಸಿ.ಪ್ರಸಾದ್ ಮಾತನಾಡಿ ದರು.ವಕೀಲರ ಸಂಘದ ಅಧ್ಯಕ್ಷ ಎಸ್.ರಾಜಗೋಪಾಲ್, ವಕೀಲರಾದ ಆರ್.ವಿ.ರಮೇಶ್, ಜನಾರ್ದನ್,
ಹುಸೇನ್,ಗ್ರಾ.ಪಂ ಪಿ.ಡಿ.ಓ ವೀಣಾ ಮತ್ತಿತರಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು