ವಿಜಯ ಸಂಘರ್ಷ
ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಅನೇಕ ಕವಿ ಸಾಹಿತಿಗಳನ್ನು ನೀಡಿ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದೆ.
ಅದರಂತೆ ಹೊಸನಗರ ತಾಲೂಕಿನ ಯುವಸಾಹಿತಿ ಪತ್ರಕರ್ತ ರಫಿ ರಿಪ್ಪನಪೇಟೆ ಇದೀಗ ಎಲ್ಲರಿಗೂ ಕೂಡ ಚಿರಪರಿಚಿತ ಇವರ ಸಾಧನೆಗೆ ಬರಹಕ್ಕೆ ಸಾಹಿತ್ಯಕ್ಕೆ ಮೆಚ್ಚುಗೆ ಪಡೆದೆ ಇವರಿಗೆ ಇತ್ತೀಚಿಗಷ್ಟೆ ಸಿದ್ಧಗಂಗಾ ಮಠದಲ್ಲಿ ರಫಿ ರಿಪ್ಪನ್ ಪೇಟೆ ಯವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು.
ರಿಪ್ಪನ್ ಪೇಟೆಯ ಕಸ್ತೂರಿ ಕನ್ನಡ ಸಂಘ ಎಲೆ ಮರೆ ಕಾಯಿಯಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸನ್ಮಾನಿತರನ್ನು ಗೌರವಿಸಿತು.ಅದರಲ್ಲಿ ರಫಿ ರಿಪ್ಪನ್ ಪೇಟೆರವರು ಕೂಡ ಒಬ್ಬರಾಗಿದ್ದರು.
*ವಿಭಿನ್ನ ಸನ್ನಿವೇಶಕ್ಕೆ ಸಾಕ್ಷಿಯಾದ ರಫಿ ರಿಪ್ಪನ್ ಪೇಟೆ ಅವರ ಸನ್ಮಾನ*
ರಾಜಕೀಯ ವಲಯದಲ್ಲಿ ಹಾಲಿ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಬದ್ಧ ವೈರಿಗಳು ಇವರಿಬ್ಬರು ಒಂದೇ ವೇದಿಕೆಯಲ್ಲಿ ಬಹಳ ವರ್ಷಗಳ ನಂತರ ಕಂಡಿದ್ದು ಇದೇ ಮೊದಲು ಇಂತಹ ವಿಭಿನ್ನ ಸನ್ನಿವೇಶದ ವೇದಿಕೆಯಲ್ಲಿ ಇವರಿಗೆ ಸನ್ಮಾನ ಮಾಡಿದ್ದು ನಿಜಕ್ಕೂ ಅಲ್ಲಿದ್ದ ಅಭಿಮಾನಿ ಬಳಗಕ್ಕೆ ಹರ್ಷ ವೆನಿಸಿತು.
ಜೊತೆಗೆ ರಿಪ್ಪನ್ ಪೇಟೆ ಯುವಕ ಮಧುಸೂದನ್ ಬೆಂಗಳೂರಿನ ಜಿಕೆವಿಕೆಯಲ್ಲಿ ಅದ್ವಿತೀಯ ಸಾಧನೆ ಮಾಡಿ ಚಿನ್ನದ ಪದಕ ಗಳಿಸುತ್ತಿದ್ದ ಬಂಗಾರದ ಯುವಕನಿಗೂ ಕೂಡ ಇದೇ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು.
ಒಟ್ಟಾರೆ ಮಲೆನಾಡು ಇಡೀ ದೇಶಕ್ಕೆ ಅದ್ವಿತೀಯ ಅಪ್ರತಿಮ ಸಾಧಕರನ್ನು ನೀಡಿದೆ ನಮ್ಮೂರಿನ ಹೆಮ್ಮೆಯ ಯುವಕರಿಗೆ ಸಾವಿರಾರು ಜನರ ಸಮ್ಮುಖದಲ್ಲಿ ಸನ್ಮಾನಿಸಿದ್ದು ಮಾತ್ರ ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.
ವರದಿ : ಪವನ್ ಕುಮಾರ್ ಕಠಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795