ಆಲುವಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದಿವಿನಾಯಕ ಗೆಳೆಯರ ಬಳಗದಿಂದ ವಾಲಿಬಾಲ್ ಪಂದ್ಯಾವಳಿ

 

ವಿಜಯ ಸಂಘರ್ಷ



ಹೊಸನಗರ : ತಾಲೂಕಿನ ಆಲುವಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದಿವಿನಾಯಕ ಗೆಳೆಯರ ಬಳಗ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ಉದ್ಘಾಟಿಸಿದರು.

ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಭಾಗವಹಿಸುವುದೇ ಮುಖ್ಯ. ಸೋಲು ಗೆಲುವಿನ ಮೊದಲ ಮೆಟ್ಟಿಲು ಎಂಬುದನ್ನು ಅರಿತು ಆಟಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಸಿದ್ದಿ ವಿನಾಯಕ ಗೆಳೆಯರ ಬಳಗಕ್ಕೆ ಈ ಬಾರಿ ಕೊಟ್ಟಂತಹ ಸಲಹೆ ಸಹಕಾರವನ್ನು ಮುಂದಿನ ಬಾರಿಯು ನೀಡುತ್ತೇನೆ ಎಂದರು.

ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ಼್ ಮೊಬೈಲ್ ಮತ್ತು ಟಿವಿ ಮಾಧ್ಯಮದ
ಪ್ರಭಾವದಿಂದ ಕ್ರೀಡೆಗಳು ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಆಲುವಳ್ಳಿಯ ಸಿದ್ದಿ ವಿನಾಯಕ ಗೆಳೆಯರ ಬಳಗ ಹಾಗೂ ಊರ ನಾಗರಿಕರು ಪಂದ್ಯಾವಳಿಯನ್ನು ಆಯೋಜಿಸಿ ಅಭಿವೃದ್ಧಿ ಮತ್ತು ಸಂಬಂಧದ ಬೆಸುಗೆಗೆ ಮುನ್ನುಡಿ ಬರೆಯುತ್ತಿರುವದು ಮಾದರಿಯಾಗಿದೆ ಎಂದರು.

ರಾಜ್ಯದ ಅನೇಕ ಭಾಗಗಳಿಂದ ಹಲವಾರು ಪ್ರತಿಭಾನ್ವಿತ ತಂಡಗಳು ಆಗಮಿಸಿದ್ದವು ಈ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಯುನೈಟೆಡ್ ತಂಡವು ಪ್ರಥಮ ಪ್ರಶಸ್ತಿ ತನ್ನದಾಗಿಸಿಕೊಂಡರೆ ದ್ವಿತೀಯ ಸ್ಥಾನವನ್ನು ಗರ್ತಿಕೆರೆಯ ಅಮೃತ ವಾಲಿಬಾಲ್ ತಂಡ ತನ್ನದಾಗಿಸಿಕೊಂಡಿತು.ಇನ್ನುಳಿದಂತೆ ಮೂರನೇ ಸ್ಥಾನ ಮಾದಾಪುರ ತಂಡ ಹಾಗೂ ನಾಲ್ಕನೇ ಸ್ಥಾನವನ್ನು ಉಡುಪಿ ತಂಡದ ಪಾಲಾಯಿತು.

ಮುಖಂಡರಾದ ಈಶ್ವರಪ್ಪ ಗೌಡ ,ರಾಜೇಶ್ ಜೈನ್,ಸಿದ್ದಿ ವಿನಾಯಕ ಗೆಳೆಯರ ಬಳಗ ಆಲುವಳ್ಳಿ ಯ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಊರಿನ ಹಿರಿಯರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು