ಭದ್ರಾವತಿಯಲ್ಲಿ ಓಮಿಕ್ರಾನ್ ಪತ್ತೆ: ನಾಗರಿಕರೇ ಎಚ್ಚರವಿರಲಿ

 

ವಿಜಯ ಸಂಘರ್ಷ



ಭದ್ರಾವತಿ: ನಿರ್ಮಲ ನರ್ಸಿಂಗ್ ಹೋಂ ಕಾಲೇಜಿನ ವಿದ್ಯಾರ್ಥಿನಿಗೆ ಡಿಸೆಂಬರ್ 9ರಂದು ಕೊರೊನಾ ಸೋಂಕು ದೃಢವಾಗಿದ್ದ ಹಿನ್ನೆಲೆ ಸೋಂಕಿತಳ ಸ್ಯಾಂಪಲ್ಸ್ ಅನ್ನು ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ರವಾನೆ ಮಾಡಲಾಗಿತ್ತು.
ನಿನ್ನೆ ಇದರ ವರದಿ ಬಂದಿದ್ದು ಒಟ್ಟು 27 ವಿದ್ಯಾರ್ಥಿಗಳಲ್ಲಿ ಪೈಕಿ ಒಬ್ಬರಲ್ಲಿ ಮಾತ್ರ ರೂಪಾಂತರಿ ಒಮಿಕ್ರಾನ್ ಪತ್ತೆಯಾಗಿದೆ. ವಿದ್ಯಾರ್ಥಿನಿಗೆ ಸೋಂಕು ಕಂಡು ಬಂದಿರುವುದನ್ನು ದೃಢಪಡಿಸಿದ ಜಿಲ್ಲಾ ವೈದ್ಯಾಧಿಕಾರಿ (ಡಿಎಚ್‌ಒ) ಸೋಂಕಿತ ವಿದ್ಯಾರ್ಥಿನಿಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ. ಆದರೂ ಒಮಿಕ್ರಾನ್ ದೃಢಪಟ್ಟಿರುವುದು ಅಚ್ಚರಿ ಮೂಡಿಸಿದೆ. ಸೋಂಕಿತ ವ್ಯಕ್ತಿಗೆ ಐಸೋಲೇಷನ್ ನಲ್ಲೇ ಚಿಕಿತ್ಸೆ ಮುಂದುವರಿಯಲಿದೆ ಎಂದಿದ್ದಾರೆ.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ  +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು