ವಿಜಯಸಂಘರ್ಷ /ಸಾಗರ
ನಗರಸಭೆ ಕಚೇರಿಯಲ್ಲಿ ಇ-ಸ್ವತ್ತಿನ ದಾಖಲೆ ನೀಡುವಲ್ಲಿ ವಿಳಂಬವಾಗುತ್ತಿದೆ ಎಂಬ ದೂರಿನ ನ್ವಯ ಶಾಸಕ ಎಚ್. ಹಾಲಪ್ಪ ಹರತಾಳು ನಗರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಳಂಬಕ್ಕೆ ಕಾರಣರಾದ ಅಧಿಕಾರಿ, ನೌಕರರನ್ನು ತರಾಟೆಗೆ ತೆಗೆದುಕೊಂಡರು.
ತಮ್ಮ ಸ್ವತ್ತನ್ನು ಇ- ಸ್ವತ್ತಿನ ಮಾದರಿಗೆ ಅಳವಡಿಸಿ ದಾಖಲೆ ನೀಡುವಂತೆ ನಾಗರಾಜ್ ಎಂಬುವವರು ನಗರಸಭೆ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸಂಬಂಧಪಟ್ಟ ಸಿಬ್ಬಂದಿ ಅವರನ್ನು ಹಲವು ಬಾರಿ ಕಚೇರಿಗೆ ಅಲೆಸಿ ಕೆಲಸ ಮಾಡಿಕೊಟ್ಟಿರಲಿಲ್ಲ. ಈ ಬಗ್ಗೆ ನಾಗರಾಜ್ ಅವರು ಶಾಸಕರಿಗೆ ದೂರು ನೀಡಿದ್ದರು.
ಸಿಬ್ಬಂದಿ ಅಣ್ಣಪ್ಪಸ್ವಾಮಿ ಅವರ ಬಳಿ ನಾಗರಾಜ್ ಅವರು ನೀಡಿದ ಅರ್ಜಿ ಇದೆ ಎಂಬುದನ್ನು ತಿಳಿದ ಶಾಸಕ
ಹಾಲಪ್ಪ ಪರಿಶೀಲನೆ ನಡೆಸಿದಾಗ ಕಡತ ನಾಪತ್ತೆಯಾಗಿದೆ ಎಂಬ ಸಬೂಬು ಕೇಳಿಬಂದಿತ್ತು. ಶಾಸಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದು ಕೊಂಡ ನಂತರ ಕಡತವನ್ನು ಪತ್ತೆ ಹಚ್ಚಲಾಯಿತು.
ಇಂತಹ ಲೋಪಗಳು ಮರುಕಳಿಸ ದಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ದಾಖಲೆಗಳು ಸಮರ್ಪಕವಾಗಿಲ್ಲ ಎಂದು ಹೇಳಿ ಸಾರ್ವಜನಿಕರನ್ನು ಕಚೇರಿಗೆ ಅಲೆಸುವುದು ನಿಲ್ಲಬೇಕು. ಈ ಸ್ವತ್ತಿನ ದಾಖಲೆ ಪಡೆಯಲು ಅರ್ಜಿ ಸಲ್ಲಿಸುವಾಗಲೇ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಾರ್ವಜನಿಕರಿಂದ ಪಡೆಯಬೇಕು. ಈ ಸಂಬಂಧ ಮತ್ತೆ ಸಾರ್ವಜನಿಕರಿಂದ ದೂರು ಬಂದರೆ ವಿಳಂಬಕ್ಕೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗು ತ್ತದೆ ಎಂದು ಅವರು ಎಚ್ಚರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ಸ್ವತ್ತಿನ ದಾಖಲೆ ನೀಡುವಲ್ಲಿ ಸ್ಕ್ಯಾನರ್ ಯಂತ್ರದ ಕೊರತೆ ಇರುವುದಾಗಿ ಪೌರಾಯುಕ್ತರು ತಿಳಿಸಿದ್ದಾರೆ. ಶೀಘ್ರವಾಗಿ ಈ ಕೊರತೆಯನ್ನು ನೀಗಿಸಲಾಗುವುದು. ಕಾಮಗಾರಿಗಳ ಅನುಷ್ಠಾನಕ್ಕೆ ವಿಳಂಬ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಎಂಜಿನಿಯ ರ್ ವಿರುದ್ಧ ಕ್ರಮ ಕೈಗೊಳ್ಳಲಾಗುವು ದು' ಎಂದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾ ನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಟಿ.ಡಿ. ಮೇಘರಾಜ್, ಕೆ.ಆರ್.ಗಣೇಶ್ ಪ್ರಸಾದ್, ಪೌರಾಯುಕ್ತ ರಾಜು ಡಿ.ಬಣಕಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಕೆ. ನಾಗಪ್ಪ ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795