ವಿದ್ಯುತ್‌ ಅವಘಡ- ಶಾರ್ಟ್‌ ಸರ್ಕಿಟ್‌ ಭಯ ಗ್ರಾಹಕರನ್ನು ಆವರಿಸಿದೆ

 


ವಿಜಯಸಂಘರ್ಷ /ತೀರ್ಥಹಳ್ಳಿ


ಮುಂಗಾರು ಆರಂಭವಾ ಗುತ್ತಿದ್ದಂತೆಯೇ ತಾಲ್ಲೂಕಿನಲ್ಲಿ ವಿದ್ಯುತ್‌ ಪೂರೈಕೆಯಲ್ಲಿನ ಸಮಸ್ಯೆ ಹೆಚ್ಚುತ್ತಿದೆ.

ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (ಡಿಡಿಯುಜಿವೈ) ಅಡಿಯಲ್ಲಿ ಉಪಪ್ರಸರಣ, ವಿತರಣಾ ಮಾರ್ಗ ಬಲಪಡಿಸುವಿಕೆ, ಫೀಡರ್ ಸೆಗ್ರಿಗೇಷನ್, ಮೀಟರಿಂಗ್, ಗ್ರಾಮೀಣ ವಿದ್ಯುದ್ದೀಕರಣ, ಸಂಸದ್ ಆದರ್ಶ ಗ್ರಾಮ ಯೋಜನೆ ಮುಂತಾದ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಅವಸರದ ಕಾಮಗಾರಿ ಹಲವು ಸಮಸ್ಯೆಗೆ ಕಾರಣವಾಗಿದೆ.ವಿದ್ಯುತ್‌ ಬಳಕೆ ಮಾಪನಕ್ಕೆ ತೊಂದರೆಯಾಗು ತ್ತಿದ್ದ ಮೀಟರ್‌ ಗಳನ್ನು ಈ ಯೋಜನೆ ಯಡಿ ಕಣ್ಣಿಗೆ ಕಾಣಿಸುವ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಮರದ ಹಲಗೆಯ ಮೇಲಿದ್ದ ಮೀಟರ್‌ಗಳನ್ನು ಕಬ್ಬಿಣದ ಬಾಕ್ಸ್‌ಗಳಿಗೆ ಸೇರಿಸಲಾಗಿದೆ. ಮೆಸ್ಕಾಂನ ಕೆಲವು ಸಿಬ್ಬಂದಿ ಮಾಡಿದ ಯಡವಟ್ಟುಗಳಿಂದ ವಿದ್ಯುತ್‌ ಅವಘಡ, ಶಾರ್ಟ್‌ ಸರ್ಕಿಟ್‌ ಭಯ ಗ್ರಾಹಕರನ್ನು ಆವರಿಸಿದೆ.

ಅವಘಡದ ಭಯ: 'ಮೀಟರ್‌ ಅಳವಡಿಕೆ ಸಂದರ್ಭ ಫೀಡರ್‌ ಮೂಲಕ ಬಂದಿರುವ ವೈರ್‌ ಮತ್ತು ಮನೆ ಬಳಕೆಯ ವೈರ್‌ಗಳನ್ನು ನೇರವಾಗಿ ಜೋಡಣೆ ಮಾಡಲಾಗಿದೆ. ಅಲ್ಯೂಮಿನಿಯಂ, ಕಾಪರ್‌ ವೈರ್‌ಗಳನ್ನು ಅವೈಜ್ಞಾನಿಕವಾಗಿ ಜೋಡಿಸಿದ್ದು ಮಳೆಗಾಲದ ಶೀತ ವಾತಾವರಣಕ್ಕೆ ಸಡಿಲ ಸಂಪರ್ಕ (ಲೂಸ್‌ ಕಾಂಟ್ಯಾಕ್ಟ್‌) ಆಗುತ್ತಿದೆ. ಈ ಎರಡು ಬಗೆಯ ವೈರ್‌ ಗುಣ ಮತ್ತು ಸ್ವಭಾವದಿಂದ ಹೊಂದಿಕೆಯಾಗು ವುದಿಲ್ಲ. ಇದರಿಂದ ಕಬ್ಬಿಣದ ಬಾಕ್ಸ್‌ ಗಳಿಗೂ ವಿದ್ಯುತ್‌ ತಗುಲುವಂತಿದ್ದು, ಮೀಟರ್‌ಗೆ ಬೆಂಕಿ ತಗುಲಿ ಹಾನಿಗೀಡಾ ಗುತ್ತಿದೆ. ಹೆಚ್ಚಿನ ವೋಲ್ಟೇಜ್‌ ಬಳಕೆ ಯಾದ ವೇಳೆ ಮನೆಯಲ್ಲಿರುವ ವಿದ್ಯುತ್‌ ಚಾಲಿತ ಯಂತ್ರಗಳು ಹಾಳಾಗುತ್ತಿವೆ' ಎಂದು ಮಿಥುನ್‌ ಕುರುವಳ್ಳಿ ದೂರುತ್ತಾರೆ.

ಆಧುನಿಕ ಮಾದರಿಯ ವೈಜ್ಞಾನಿಕ ಉಪಕರಣಗಳು ಸರಬರಾಜು ಆಗುತ್ತಿಲ್ಲ. ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಿದ್ದು, ಇರುವ ವ್ಯವಸ್ಥೆಯಲ್ಲೇ ಕೆಲಸ ಮಾಡಿ ಮುಗಿಸುವ ಅನಿವಾರ್ಯತೆ ಇದೆ. ಮೇಲಧಿಕಾರಿ ಗಳ ವಿಳಂಬ ಧೋರಣೆ ಪರಿಣಾಮ ಉಪಕರಣ ಪೂರೈಕೆ ಸರಿಯಾಗಿ ನಡೆಯುತ್ತಿಲ್ಲ' ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.


ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು