ಬಿಸಿಯೂಟ ತಯಾರಿಕೆ ಅನಾಹುತವಾದಲ್ಲಿ ಶಾಲಾ ಮುಖ್ಯಸ್ಥರೆ ಹೊಣೆ: ಶಶಿಕುಮಾರ್

 

ವಿಜಯಸಂಘರ್ಷ /ಭದ್ರಾವತಿ


ತಾಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗ್ಯಾಸ್‌ ಸಿಲಿಂಡರ್ ಮತ್ತು ಕುಕ್ಕರ್ ಗಳು ಇನ್ನಿತರ ಸಲಕರಣೆಗಳಿಂದ ಸುರಕ್ಷತೆ ಕಾಪಾಡಿ ಅಡುಗೆ ತಯಾರಿಸುವಂತಾಗಬೇಕೆಂದು ಜೆಡಿಯು ಮುಖಂಡ ಶಶಿಕುಮಾರ್ ಎಸ್ ಗೌಡ ಒಟ್ಟಾಯಿಸಿದರು.

ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದ ಮಾತನಾಡಿ,

ಕಳೆದ ವರ್ಷ ಬೆಂಕಿ ಅನಾಹುತದಿಂದ ಭಯದ ವಾತಾವರಣ ಸೃಷ್ಟಿಯಾಗಿತ್ತು. ಆ ಸಂದರ್ಭದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ ಘಟನೆಗಳು ನಡೆದಿರುತ್ತವೆ.

ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಲಿಂಡರ್ ಮತ್ತು ಕುಕ್ಕರ್ ಉತ್ತಮ ಕಾರ್ಯನಿರ್ವ ಹಿಸುವಂತೆ ಬಿಸಿಯೂಟ ಸಿಬ್ಬಂದಿಗಳಿಗೆ ಸೂಚಿಸಲು ಒತ್ತಾಯಿಸಿದರು.

ತಾಲ್ಲೂಕಿನ ಶಾಲೆಗಳಿಗೆ ಸುರಕ್ಷತೆ ಯಿಂದ ಇರಲು ಶಿಕ್ಷಕರಿಗೆ ಸೂಚಿಸ ಬೇಕು,ಮುಂದಿನ ದಿನಗಳಲ್ಲಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿ ಗಳಿಗೆ ಏನಾದರೂ ಅಹಿತಕರ ಘಟನೆ ನಡೆದರೆ, ಸಂಬಂಧಪಟ್ಟ ಇಲಾಖೆ ಮತ್ತು ಸಂಬಂಧಪಟ್ಟ ಶಾಲೆಯ ಮುಖ್ಯಸ್ಥರ ನ್ನು ನೇರ ಹೊಣೆಗಾರರಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.


ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು