ವಿಜಯ ಸಂಘರ್ಷ
ಭದ್ರಾವತಿ: ಅಕ್ಷರಸ್ಥರು ಮತದಾನ ಮಾಡಲು ಆಸಕ್ತಿ ತೋರದಿರುವುದು ವಿಷಾದನೀಯ ಸಂಗತಿ ಎಂದು ಶಿಕ್ಷಣ ಇಲಾಖೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪಹೇಳಿದರು.
ಅವರು ಲಯನ್ಸ್ ಕ್ಲಬ್ ಸಭಾಂಗಣ ದಲ್ಲಿ ಹಮ್ಮಿಕೊಂಡಿದ್ದ ಭಾರತ ಚುನಾವಣೆ ಆಯೋಗ, ಶಿಕ್ಷಣ ಇಲಾಖೆ,ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
18 ವರ್ಷ ತುಂಬಿದ ಪ್ರತಿಯೊಬ್ಬ ರಿಗೂ ಉತ್ತಮ ಪ್ರಜೆಗಳನ್ನು ಆಯ್ಕೆ ಮಾಡುವುದಕ್ಕೆ ಅಧಿಕಾರವಿದೆ. ಇದರ ಸದುಪಯೋಗ ಮುಂದಾಗುವಂತೆ ಕರೆ ನೀಡಿದ ಅವರು ಯುವಕರು ಜಾಗೃತ ರಾಗಿ ಮತದಾನಕ್ಕೆ ಮುಂದಾಗುವಂತೆ ಕರೆ ನೀಡಿದರು.
ತಹಶೀಲ್ದಾರ್ ಪ್ರದೀಪ್ ಮಾತನಾಡಿ, ಯುವ ಮತದಾರರು ಸಕಾಲದಲ್ಲಿ ನೋಂದಣಿ ಮಾಡಿಸಿ, ಮತದಾನಕ್ಕೆ ಮುಂದಾಗಬೇಕು. ಕ್ಷೇತ್ರದಲ್ಲಿ ಶೇಕಡ ವಾರು ಕೇವಲ 67 ರಷ್ಟು ಮಾತ್ರ ಮತದಾನ ವಾಗುತ್ತಿವೆ. ಇನ್ನು ಹೆಚ್ಚಿನ ಜಾಗೃತಿ ಹಾಗೂ ಅರಿವು ಮೂಡಿಸಲು ಯುವಶಕ್ತಿ ಮುಂದಾಗಬೇಕು ಎಂದರು.
ಪೌರಾಯುಕ್ತ ಮನುಕುಮಾರ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಗರಸಭಾ ಉಪಾಧ್ಯಕ್ಷ ಚನ್ನಪ್ಪ,ಲಯನ್ಸ್ ಕ್ಲಬ್ ಅಧ್ಯಕ್ಷ ಕಾರ್ತಿಕ್, ಸಿಡಿಪಿಓ ಸುರೇಶ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ನವೀದ್ ಫಾರ್ವೇಜ್ ಮತ್ತಿತರರು ಭಾಗವಹಿಸಿದ್ದರು.
ನಂತರ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ
ಪ್ರಬಂಧ ಸ್ಪರ್ಧೆ ಕನ್ನಡ ಭಾಷೆಯಲ್ಲಿ 'ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು' ವಿಷಯ ಕುರಿತು ಮತ್ತು ಆಂಗ್ಲ ಭಾಷೆಯಲ್ಲಿ 'ಫಂಡಮೆಂಟಲ್ ರೈಟ್ಸ್ ಅಂಡ್ ಡ್ಯೂಟಿಸ್ ಆಫ್ ಇಂಡಿಯನ್ ಕಾನ್‌ಸ್ಟಿಟ್ಯೂಷನ್' ವಿಷಯ ಕುರಿತು ಹಾಗು ಮಾದರಿ ಮತದಾನ ಕೇಂದ್ರ ಕುರಿತು ಭಿತ್ತಿ ಚಿತ್ರ ಮತ್ತು ಚುನಾವಣೆಗೆ ಸಂಬಂಧಿಸಿದ ವಿಷಯಗಳು ರಸ ಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಂತರ ತಹಶೀಲ್ದಾರ್ ಪ್ರದೀಪ್ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
9743225795