ವಿಜಯ ಸಂಘರ್ಷ
ಭದ್ರಾವತಿ: ಮತದಾರರ ಪಟ್ಟಿಯ ಲ್ಲಿರುವ ಮರಣ ಹೊಂದಿದವರ ಹೆಸರನ್ನು ತೆಗೆದುಹಾಕುವಂತೆ ಒತ್ತಾಯಿಸಿ ಜೆಡಿಯು ಹಾಗೂ ಕೆಆರ್ ಎಸ್ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಬುಧವಾರ ವಿಧಾನ ಸೌಧ ಮುಂಭಾಗ
ಮಾತನಾಡಿ, ಕೇವಲ ಭದ್ರಾವತಿ ಮಾತ್ರವಲ್ಲದೆ ರಾಜ್ಯಾದ್ಯಂತ ಮತದಾರರ ಪಟ್ಟಿಯಲ್ಲಿರುವ ಅನೇಕರು ಮೃತಪಟ್ಟಿದ್ದು ಅವರ ಹೆಸರುಗಳು ಇನ್ನೂ ಮತದಾರರ ಪಟ್ಟಿಯಲ್ಲಿ ಜೀವಂತವಾಗಿರುವುದು ದುರಂತ ವಿಷಯ ಎಂದರು.
ಇದಕ್ಕೆ ತಾಜ ಉದಾಹರಣೆ ಎಂಬಂತೆ ನ್ಯೂಟೌನ್ ಭಾಗದ ಲೇಡೀಸ್ ಕ್ಲಬ್ ಮತದಾನ ಕೇಂದ್ರದಲ್ಲಿ ಭಾಗದ ಸಂಖ್ಯೆ 157 ರಲ್ಲಿ ಸರಿಸುಮಾರು 834 ಮತದಾರರ ಇದ್ದು ಅದರಲ್ಲಿ 88 ಜನ ಮರಣ ಹೊಂದಿದ್ದು 2013 ರಿಂದ 2022ರ ತನಕ ಇಲ್ಲಿಯವರೆಗೂ ಕೂಡ ಸ್ಥಳೀಯ ಚುನಾವಣಾ ಅಧಿಕಾರಿಗಳ ಹಾಗೂ ಬಿಎಲ್ ಓ ಗಳ ನಿರ್ಲಕ್ಷದಿಂದ ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದವರ ಹೆಸರು ತೆಗೆದು ಹಾಕದೆ ಹಾಗೆ ಮುಂದುವರೆಸಿರುವುದು ಖಂಡನೀಯ. ಚುನಾವಣೆ ವರ್ಷವಾ ಗಿರುವ ಹಿನ್ನಲೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಲೋಪ ಸರಿಪಡಿಸಲು ಮುಂದಾಗಲಿ ಎಂದರು.
ರಾಜ್ಯದಲ್ಲಿ ಸರಿ ಸುಮಾರು ಆರು ಕೋಟಿ ಮತದಾರರು ಇದ್ದು ಒಂದು ಬೂತ್ ನಲ್ಲಿ ಶೇ:12 ಮರಣ ಹೊಂದಿದವರು ಹೆಸರು ಇರುವುದ ರಿಂದ ಕರ್ನಾಟಕ ರಾಜ್ಯದ್ಯಂತ ಇರುವ ಮತದಾರ ಪಟ್ಟಿಯಲ್ಲಿ ಮರಣ ಹೊಂದಿರುವವರ ಸಂಖ್ಯೆ ಒಂದು ಕೋಟಿಗೂ ಅಧಿಕ ವಾಗಿರುವುದು ವಿಪರ್ಯಾಸದ ಸಂಗತಿ. ಚುನಾವಣಾ ಆಯೋಗ ಅಂಕಿ ಅಂಶಗಳನ್ನು ಚುನಾ ವಣೆ ಸಂದರ್ಭದಲ್ಲಿ ಪುಕಟಿಸುವ ಪ್ರಕಟಣೆ ಮಾಡುವಾಗ ಸ್ಥಳೀಯ ಚುನಾವಣೆ ಅಧಿಕಾರಿಗಳ ನಿರ್ಲಕ್ಷ ದಿಂದ ಮರಣ ಹೊಂದಿದವರ ಅಂಕಿ ಅಂಶಗಳು ಕೂಡ ಸೇರಿಕೊಂಡಿ ರುತ್ತವೆ. ಜೊತೆಗೆ ಚುನಾವಣೆಗೆ ಸ್ಪರ್ಧಿಸುವ ಪ್ರಭಾವಿ ರಾಜಕಾರಣಿ ಗಳು ತಮ್ಮ ಭೂತ್ ಏಜೆಂಟರ ಮೂಲಕ ಮರಣ ಹೊಂದಿದವರ ಹೆಸರಿನಲ್ಲಿ ಕಳ್ಳ ಮತದಾನ ಹಾಕಿಸಿ ಕೊಳ್ಳುವಲ್ಲಿ ಯಶಸ್ವಿಯಾಗು ತ್ತಿರುತ್ತಾರೆಂದು ಆರೋಪಿಸಿದರು.
ಚುನಾವಣಾ ಆಯೋಗ ಸೂಕ್ಷ್ಮವಾಗಿ ಗಮನಿಸಿ ಮುಂದಿನ 2023 ರ ಸಾರ್ವತ್ರಿಕ ಚುನಾವಣೆ ಬರುವ ಮೊದಲೇ ಮುಂಚಿತವಾಗಿ ಆಗಿರುವ ಲೋಪ ಸರಿಪಡಿಸಿ, ಮೃತಪಟ್ಟ ವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವಂತೆ ಒತ್ತಾಯಿಸಿ ತಹಸೀಲ್ದಾರ್ ಪ್ರದೀಪ್ ರವರ ಮೂಲಕ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ, ಕೆಆರ್ ಎಸ್ ಪಕ್ಷದ ರೈತ ಘಟಕದ ಜಿಲ್ಲಾಧ್ಯಕ್ಷ ಶರತ್ ಕುಮಾರ್ ಇದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795
ಅತ್ಯುತ್ತಮ ಸುದ್ದಿಗಳನ್ನು ಪ್ರಸ್ತುತಪಡಿಸುತ್ತಿರುವ ಆರ್. ವಿ. ಕೃಷ್ಣರವರಿಗೆ ತುಂಬು ಹೃದಯದ ಅಭಿನಂದನೆಗಳು ಶುಭವಾಗಲಿ
ಪ್ರತ್ಯುತ್ತರಅಳಿಸಿ