ವಿಜಯ ಸಂಘರ್ಷ
ಭದ್ರಾವತಿ: ಪ್ರಜಾಪ್ರಭುತ್ವದಲ್ಲಿ
ಮತದಾನದ ಪ್ರಾಮುಖ್ಯತೆ ಮತ್ತು ಯುವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ. ಧನಂಜಯ ತಿಳಿಸಿದರು.
ಬುಧವಾರ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮತದಾ ರರ ಸಾಕ್ಷರತಾ ಕ್ಲಬ್ ವತಿಯಿಂದ ಕಾಲೇಜಿನಲ್ಲಿ ಮತದಾರರ ಸಾಕ್ಷರತೆ ಯ ಕುರಿತು ವಿವಿಧ ಚಟುವಟಿಕೆ ಗಳನ್ನು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮತದಾನದಿಂದ ಯಾರು ಸಹ ವಂಚಿತರಾಗಬಾರದು. ಒಂದು ವೇಳೆ ಎರಡು ಕಡೆ ಮತದಾ ರರ ಪಟ್ಟಿಯಲ್ಲಿ ಮತದಾರರ ಹೆಸರು
ಕಂಡು ಬಂದಲ್ಲಿ ಒಂದು ಕಡೆ ಅದನ್ನು ರದ್ದುಪಡಿಸ ಬೇಕು. ಆ ಮೂಲಕ ಪಾರದರ್ಶಕ ಮತದಾನಕ್ಕೆ ಅವಕಾಶ ವನ್ನು
ಮಾಡಿಕೊಡಬೇಕು ಎಂದರು.
18 ವರ್ಷ ಆದ ಪ್ರತಿಯೊಬ್ಬರೂ ಸಹ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು
ನೋಂದಾಯಿಸಿ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕರೆ ನೀಡಿದರು.
ಸಾಕ್ಷರತಾ ಕ್ಲಬ್ ನ ಸಂಯೋಜಕ ಪರಶುರಾಮ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮನೋಹರ್ ನಿರೂಪಿಸಿದರು.
ಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795