ನೆನೆಗುದಿಗೆ ಬಿದ್ದಿರುವ ಪಶು ಸಂಜೀವಿನಿ ಯೋಜನೆ ಜಾರಿಗೆ ಒತ್ತಾಯ: ಶಶಿಕುಮಾರ್

ವಿಜಯ ಸಂಘರ್ಷ 


ಭದ್ರಾವತಿ: ತಾಲೂಕು ಪಶು ಇಲಾಖೆ ವತಿಯಿಂದ ಪಶುಗಳಿಗೆ ತುರ್ತು ಚಿಕಿತ್ಸೆಗೆ ನೆರವಾಗಲು ರೂಪಿಸಿದ ಪಶು ಸಂಜೀವಿನಿ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಜೆಡಿಯು ಮುಖಂಡ ಶಶಿಕುಮಾರ್ ಎಸ್ ಗೌಡ ಆರೋಪಿಸಿದರು.

ಅವರು ಗುರುವಾರ ಪಶು ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿ ಮಾತನಾಡಿ,ಸಾರ್ವಜನಿಕರಿಗೆ ಆರೋಗ್ಯದಲ್ಲಿ ಏರುಪೇರಾದರೆ ನೆರವಾಗಲು ಇರುವ ಸರ್ಕಾರ 108  ಆಂಬುಲೆನ್ಸ್ ಸೇವೆ ಒದಗಿಸಿದೆ. ಅದೇ ಮಾದರಿ ಪಶುಗಳಿಗೂ ಸಹ ತುರ್ತು ಚಿಕಿತ್ಸೆಗೆ ನೆರವಾಗುವಂತೆ ಕಳೆದ ಜುಲೈ ತಿಂಗಳಲ್ಲಿ ಪಶು ಸಂಜೀವಿನಿ ಯೋಜನೆಯನ್ನು ಪಶು ಸಚಿವ ಪ್ರಭು ಚೌಹಾಣ್ ಘೋಷಿಸಿ,1962 ಕಾಲ್ ಸೆಂಟರ್ ನಂಬರ್ ನೀಡಿತ್ತು. ಆದರೆ ಕಳೆದ ಆರು ತಿಂಗಳಿನಿಂದ ಯೋಜನೆ ಅನುಷ್ಠಾನಕ್ಕೆ ಬಂದಿರುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಈಗಾಗಲೇ ರಾಜ್ಯದ ರೈತರು ಜಾನು ವಾರುಗಳಿಗೆ ಬಾಧಿಸುತ್ತಿರುವ ಕಾಲು ಬಾಯಿ ರೋಗ ಕೆಚ್ಚಲು ಬಾವ ರೋಗ ಚರ್ಮದ ಗಂಟು ರೋಗಗಳಿಂದ ಆರ್ಥಿಕವಾಗಿ ಸಂಕಷ್ಟ ಈಡಾಗಿದ್ದು ರಾಸುಗಳಿಗೆ ಬಂದಿರುವ ಈ ಕಾಯಿಲೆ ಗಳಿಂದ ಆಯಾ ಜಿಲ್ಲೆ ಜಿಲ್ಲಾಧಿಕಾರಿ ಗಳು ಜಾನುವಾರು ಸಂತೆಗಳನ್ನು ನಿಷೇಧ ಮಾಡಿದ್ದು ರೈತ ಜಾನುವಾರ ಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ಮನೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲದೆ ಅತಂತ್ರ ಸ್ಥಿತಿಗೆ ರೈತ ತಲುಪಿದ್ದಾನೆ. ಇಂತಹ ಸಮಯದಲ್ಲಿ ರಾಜ್ಯದ್ಯಂತ ಪಶು ವೈದ್ಯಾಧಿಕಾರಿಗಳ ಕೊರತೆ ಇರುವ ವೈದ್ಯಾಧಿಕಾರಿಗಳ 

ನೇಮಕ ಮಾಡಿ ಪಶು ಸಂಜೀವಿನಿ ಯೋಜನೆ ಆಂಬುಲೆನ್ಸ್ ಗಳನ್ನು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿ  ರೈತರಿಗೆ ನೆರವಾಗಬೇಕೆಂದು ಒತ್ತಾ ಯಿಸಿ ಪಶು ವೈದ್ಯರ ಮೂಲಕ ಪಶುಸಂಗೋಪನ ಸಚಿವ ಪ್ರಭು ಚವಾಣ್ ರವರಿಗೆ ಮನವಿ ಸಲ್ಲಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು