ವಿಜಯ ಸಂಘರ್ಷ
ಭದ್ರಾವತಿ : ಅವಿವಾಹಿತನೊಬ್ಬ ತನಗೆ ವಿವಾಹವಾಗಲು ಹುಡುಗಿ ಹುಡುಕಿಕೊಡುವಂತೆ ಜಿಲ್ಲಾ ಎಸ್ ಪಿ ರವರಿಗೆ ಮನವಿ ಸಲ್ಲಿಸಿರುವ ಕುತೂಹಲಕರ ಘಟನೆ ಸಂಭವಿಸಿದೆ.
ಭದ್ರಾವತಿ ನಗರದ ಹೊಸಮನೆಯ 4 ನೇ ಕ್ರಾಸ್ ವಾಸಿ ಒ.ಎಸ್. ಪ್ರವೀಣ್ ಎನ್ನುವವನೇ ಮನವಿ ಸಲ್ಲಿಸಿದವನು.
ಮನವಿಯ ಸಾರಾಂಶ ಇಂತಿದೆ:
ಗೊಲ್ಲ ಯಾದವ ಜಾತಿಗೆ ಸೇರಿದ ತಾನು ಹಲವು ಹುಡುಗಿಯರನ್ನು ನೋಡಿದರೂ ಸರಿಹೊಂದಿಲ್ಲ. ತನ್ನ ತಂದೆ ಮೃತ ಸಣ್ಣರಂಗಪ್ಪ ತೋಟಗಾರಿಕಾ ಇಲಾಖೆಯಲ್ಲಿ ಉಪನಿರ್ದೇಶರಾಗಿ ನಿವೃತ್ತ ರಾಗಿದ್ದರು. ತಾಯಿ ಮನೆಯಲ್ಲಿ ರುತ್ತಾರೆ. ಅಣ್ಣನೊಬ್ಬನಿದ್ದು ಆತನಿಗೆ ಮದ್ವೆಯಾಗಿದೆ. ತಾನು ಸಾಫ್ಟ್‌ವೇರ್ ಕಂಪನಿಯಲ್ಲಿ ಅಧ್ಯಾಪಕನಾಗಿ ಬೆಂಗಳೂರಿನಲ್ಲಿ ಕೆಲಸ ಮಾಡಿ ನಂತರ ಎಂಸಿಐ ಚಿಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಸದ್ಯ ಭದ್ರಾವತಿಯಲ್ಲಿರುವ ಸ್ವಂತ ತೋಟದಲ್ಲಿ ವ್ಯವಸಾಯ ಮಾಡುತ್ತ ಉಸ್ತುವಾರಿನೋಡಿಕೊಳ್ಳುತ್ತಿದ್ದೇನೆ.
ಕೆಲವು ವರ್ಷಗಳಿಂದ ವಧು ಅನ್ವೇಷಣೆ ಮಾಡಿದರು ನನ್ನ ಜಾತಿ ಯವರು ಸಿಕ್ಕಿಲ್ಲ. ತನ್ನ ಜಾತಿಯ ವಧು ಇದ್ದರೆ ಹುಡುಕಿಕೊಡಿ. ವಿವಾಹ ಮಾಡಿಕೊಳ್ಳಲು ನೆರವಾಗಿ ಎಂದು ಮನವಿಯಲ್ಲಿ ಕೊರಿದ್ದಾನೆ.
ಎಸ್‌ಪಿ ಅವರಿಗೆ ಮನವಿ ಜೊತೆಗೆ ಇಬ್ಬರು ಸ್ಥಳೀಯ ಪ್ರಭಾವಿ ಮುಖಂಡ ರಿಂದ ತನ್ನ ಪರಿಚಯ ಪತ್ರ ಕೊಡಿಸಿದ್ದಾನೆ.
ಈಗ ಎದುರಾಗಿರುವ ಪ್ರಶ್ನೆ ಎಂದರೆ, ಪೊಲೀಸರು ಕಳ್ಳರನ್ನು, ದುಷ್ಟರನ್ನು ಹಿಡಿಯಬೇಕೋ, ಶಾಂತಿ- ಸುವ್ಯವಸ್ಥೆ ಕಾಪಾಡ ಬೇಕೋ ಅಥವಾ ಮದ್ವೆಯಾಗ ದವರಿಗೆ ಹುಡುಗಿ ಹುಡುಕಬೇಕೋ ಎನ್ನುವುದು.