ಸಂವಿಧಾನ ಪ್ರತಿಜ್ಞಾ ವಿಧಿ ಸ್ವೀಕಾರ

 ವಿಜಯ ಸಂಘರ್ಷ



ಭದ್ರಾವತಿ : ಡಾ:ಬಾಬಾಸಾಹೇಬ್ ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಸಮರ್ಪಣೆ ಮಾಡಿದ ದಿನವನ್ನಾಗಿ ಆಚರಣೆ ಮಾಡಿ ಪ್ರತಿಜ್ಞಾವಿಧಿ ಬೋದಿಸುತ್ತಿರುವುದು ಕಾಣುತ್ತಿದ್ದೇವೆ ಎಂದು ಜೆಡಿಯು ರಾಜ್ಯಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಹೇಳಿದರು.

ಇಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿ, ಸಂವಿಧಾನದ ಆಶಯದಂತೆ ಸರ್ವರಿಗೂ ಸಮಬಾಳು,ಸಮಪಾಲು, ಜಾತ್ಯಾತೀತ,ಧರ್ಮಾತೀತ, ಪಕ್ಷಾತೀತ ಆಡಳಿತವನ್ನು ಆಳುವ ಸರ್ಕಾರಗಳು ಮಾಡುತ್ತಿವೆಯೇ ಎಂಬುದಕ್ಕೆ ಸದ್ಯ ಉತ್ತರ ದುರ್ಬೀನು ಹಾಕಿ ಹುಡುಕಿ ದರೂ ಸಿಗುವುದಿಲ್ಲಾ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಆಡಳಿತ ನಡಸಬೇಕಾದ ಪಕ್ಷಗಳು ಇಂದು ಜಾತಿ‌.ಧರ್ಮಗಳ ಬುನಾಧಿಯ ಮೇಲೆ ಅಧಿಕಾರ ನಡೆಸುತ್ತಿವೆ. ಕೇವಲ ತಾಂತ್ರಿಕವಾಗಿ ಸಂವಿಧಾನ ದಿನವನ್ನು ಆಚರಣೆ ಮಾಡುವ ಸರ್ಕಾರಗಳು ಅದರ ಪಾಲನೆ ಮಾಡದಿರುವುದು ಪ್ರಜಾಪ್ರಭುತ್ವದ ಅಣಕವೋ ಎಂದು ಪ್ರಶ್ನಿಸಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು