ಜೆ.ಎಚ್.ಪಟೇಲರ ಸಾಧನೆ ಮಹತ್ತರವಾದದ್ದು: ಜ್ಯೋತಿ

 ವಿಜಯ ಸಂಘರ್ಷ



ಭದ್ರಾವತಿ : ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲ್ ರವರ

ಮಹಾನ್ ಸಾಧನೆ ಮಹತ್ತರವಾದದ್ದು. ಇವರ ಸೇವಾಕಾರ್ಯ ಅನನ್ಯ ವಾದದ್ದು ಇಂತಹ ಚೇತನವನ್ನು ಕಳೆದುಕೊಂದದ್ದು ನಮ್ಮ ದೌರ್ಭಾಗ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಜಿಲ್ಲಾಧ್ಯಕ್ಷೆ ಹಾಗೂ ಸುರಕ್ಷಾ



ಸುರಕ್ಷಾ ವೃದ್ಧಾಶ್ರಮ ಹಾಗೂ ಅನಾಥಾಶ್ರಮದ ಅಧ್ಯಕ್ಷರಾದ ಜ್ಯೋತಿ ಸೋಮಶೇಖರ್ ಹೇಳಿದರು.

ಅವರು ಗುರುವಾರ ನಗರದ ಸಿದ್ದಾಪು ರದ ಸುರಕ್ಷಾ ಅನಾಥಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯ ಮಂತ್ರಿ ದಿವಂಗತ ಜೆ.ಹೆಚ್. ಪಟೇಲ್ ರ 23 ನೆಯ ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ಇಂತಹ ಮಹಾನ್ ವ್ಯಕ್ತಿಗಳ ಜನ್ಮದಿನ ಅಥವಾ ಪುಣ್ಯಸ್ಮರಣೆ ಅನಾಥಾಶ್ರಮ ಗಳಲ್ಲಿ  ಆಚರಿಸುವುದು ವೃದ್ಧರ ಸೌಭಾಗ್ಯ ಎಂದರು. 

ಸಮಾಜ ಸೇವಕ ಹಿರೇಮಠ್ ಮಾತನಾಡಿ ಪಟೇಲರಿಗೆ ರಾಜಕಾರಣ ತಿಳಿದಿತ್ತು ಆದರೆ ಕುತಂತ್ರ

ರಾಜಕಾರಣ ತಿಳಿದಿರಲಿಲ್ಲ ಎಂದರು.

ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಮಾತನಾಡಿ 

ರಾಜ್ಯದಲ್ಲಿ ಉತ್ತಮ ರಾಜಕಾರಣಿ ಗಳಲ್ಲಿ ಅತ್ಯುತ್ತಮ ರಾಜಕಾರಣಿಗಳಾ ಗಿದ್ದ ಪಟೇಲರು ತಮ್ಮ ಅವಧಿಯಲ್ಲಿ ಉಳಿಸಿದ್ದಕ್ಕಿಂತ ಕಳೆದುಕೊಂಡದ್ದೆ ಹೆಚ್ಚು. ಇಂತಹ ಮೇರು ರಾಜಕಾರಣಿ ಇಂದಿನ ಎಲ್ಲರಿಗೂ ಮಾದರಿಯಾ ಗಿದ್ದರು ಎಂದರು.

ನಗರಸಭಾ ಸದಸ್ಯ ಮೋಹನ್ ಕುಮಾರ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ತಾಲೂಕ್ ಅಧ್ಯಕ್ಷ ಗಂಗಾಧರ, ಕೆಆರ್ ಎಸ್ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧು ತಾಲ್ಲೂಕು ಘಟಕದ ಅಧ್ಯಕ್ಷ ಅರಳಿ ಹಳ್ಳಿ ತ್ಯಾಗರಾಜ್, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಕೆ. ಪ್ರಭು, ಮುಖಂಡರಾದ ರಾಜೇಂದ್ರ, ಸೋಮಶೇಖರ್, ಮಂಜುಳಮ್ಮ,ಲಲಿತ ಸೇರಿದಂತೆ ಆಶ್ರಮದ ವೃದ್ಧರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು