ವಿಜಯ ಸಂಘರ್ಷ
ಭದ್ರಾವತಿ : ಜಾತ್ಯಾತೀತ ಜನತಾ ದಳದ ಕಾರ್ಮಿಕ ವಿಭಾಗದ ಕಾರ್ಯಧ್ಯಕ್ಷರನ್ನಾಗಿ ಉಮೇಶ್ ರವರನ್ನು ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಡಿ.ಶ್ಯಾಮ್ ನೇಮಕ ಮಾಡಿ ಅದೇಶಿಸಿದ್ದಾರೆ.
ಪಕ್ಷದ ಸಿದ್ದಾಂತ ನಿಷ್ಠೆಗಳಿಗೆ ಬದ್ಧರಾಗಿ ಪಕ್ಷ ಸಂಘಟನೆಗೆ ಶ್ರಮಿಸುವಂತೆ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.
ನೇಮಕ ಮಾಡಲು ಸಹಕರಿಸಿ ಪ್ರೋತ್ಸಾಹಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್, ಭದ್ರಾವತಿ ಮುಖಂಡರಾದ ಶಾರದಾ ಅಪ್ಪಾಜಿ, ಅಧ್ಯಕ್ಷ ಆರ್.ಕರುಣಾ ಮೂರ್ತಿ,ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಣಿ ಶೇಖರ್, ನಗರಸಭೆ ಸದಸ್ಯರಾದ ಜಯಶೀಲ ಸುರೇಶ್ ಅವರಿಗೆ, ಜೆಡಿಎಸ್ ಪಕ್ಷದ ಮುಖಂಡರಾದ ಸುರೇಶ್ (ಕ್ಲಬ್) ಹಾಗೂ ಪಕ್ಷದ ಕಾರ್ಯಕರ್ತರಿಗೆ ಉಮೇಶ್ ಧನ್ಯವಾದ ತಿಳಿಸಿದ್ದಾರೆ.