ಕಳಪೆ ಕಾಮಗಾರಿ: ಸಿಡಿಮಿಡಿ ಗೊಂಡ ಶಾಸಕ ಹಾಲಪ್ಪ

 ವಿಜಯ ಸಂಘರ್ಷ



ಹೊಸನಗರ : ತಾಲ್ಲೂಕಿನ ರಿಪ್ಪನ್ ಪೇಟೆ ನಾಯಕ ನಗರದ ದುರ್ಗಾ ಪರಮೇಶ್ವರಿ ದೇವಸ್ಥಾನದ ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿಗೆ 35 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿರುವ ಕಾಮ ಗಾರಿ ಕಳಪೆ ಗುಣಮಟ್ಟದಲ್ಲಿ ಮಾಡಲಾಗುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ಸಿಡಿಮಿಡಿ ಗೊಂಡು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.

ಕಾಮಗಾರಿ ನಡೆಯುವ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಕೆಲಸಗಾರರ ಬಳಿ ಎಷ್ಟು ಸಿಮೆಂಟ್ ಹಾಕುತ್ತಿದ್ದೀರಾ? ಎಂದು ಪ್ರಶ್ನಿಸಿದಾಗ ತಡವರಿಸಿ ಕೆಲಸಗಾರ 10 ಚೀಲ ಎಂದು ಹೇಳಿದಾಗ ಕೋಪಗೊಂಡ ಶಾಸಕರು 14 ಚೀಲ ಹಾಕಬೇಕು. ಯಾರೋ ಗುತ್ತಿಗೆದಾರ. ಕಾಮಗಾರಿ ಕಳಪೆಯಾಗಿದೆ ಹೀಗೆ ಮಾಡದೇ ಇನ್ನೂಮ್ಮೆ ಕಿತ್ತು ಸರಿಪಡಿಸಿ ಗುಣ ಮಟ್ಟದ ರಸ್ತೆ ಮಾಡುವಂತೆ ಗುತ್ತಿಗೆ ದಾರನಿಗೆ ಖಡಕ್ ವಾರ್ನಿಂಗ್ ಮಾಡಿದರು.


ನಂತರ ಸಾಗರ ರಸ್ತೆಯ ಸಂತೆ ಮಾರ್ಕೆಟ್ ನಿಂದ ಬಸವೇಶ್ವರ ಶಾಲೆಯವರೆಗಿನ 35 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯರಾದ ದೀಪಾ, ಪಿಡಿಓ ಜೆ.ಚಂದ್ರಶೇಖರ್, ಬಿಜೆಪಿ ಮುಖಂಡರಾದ ಆರ್.ಟಿ. ಗೋಪಾಲ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಪಿ.ರಮೇಶ್, ಮಲ್ಲಿಕಾರ್ಜುನ ಜಿ.ಡಿ. ರವಿಶಂಕರ, ಸುಂದರೇಶ್, ರಚನಾ ಗವಟೂರು, ಸುಧೀರ್ ಪಿ ಇನ್ನಿತರರು ಹಾಜರಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು