ಕೆ ಆರ್ ಪೇಟೆಯಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ

 ವಿಜಯ ಸಂಘರ್ಷ



ಕೆ ಆರ್ ಪೇಟೆ: ತಾಲ್ಲೂಕಿನ ಬೂಕನ ಗ್ರಾಮದ ಶಕ್ತಿ ದೇವತೆ ಗೋಗ ಲಮ್ಮ ದೇವಾಲಯದ ಸನ್ನಿಧಿಯಲ್ಲಿ 2023 ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಮಿತ್ರ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು,ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡರಾದ ಬೂಕನಕೆರೆ ವಿಜಯ್ ರಾಮೇಗೌಡ ಅವರ ನೇತೃತ್ವ ದಲ್ಲಿ ಗ್ರಾಮದ ಶಕ್ತಿ ದೇವತೆ ಗೋಗಾ ಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನೂತನ ವರ್ಷದ ದಿನ ದರ್ಶನಕ್ಕೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ ಬೂಕನಕೆರೆ ವೆಂಕಟೇಶ್ ಮಾತನಾಡಿ, ನಮ್ಮ ಹೋಬಳಿಗೆ ಸುವರ್ಣ ಅವಕಾಶ ಬಂದಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿಗಳ  ಪಟ್ಟಿ ಯಲ್ಲಿ ಗ್ರಾಮದ ಸುಪುತ್ರ ವಿಜಯ್ ರಾಮೇಗೌಡ ಅವರ ಹೆಸರು ಇರುವು ದರಿಂದ ಸಂತಸದ ವಿಚಾರವಾಗಿದೆ. ಈಗಾಗಲೇ ಕೆಪಿಸಿಸಿ ಕಚೇರಿಗೆ ಅರ್ಜಿ ಸಲ್ಲಿಸಿರುವ ಆರು ಜನ ಟಿಕೆಟ್ ಆಕಾಂಕ್ಷಿಗಳಲ್ಲಿ ವಿಜಯ್ ರಾಮೇಗೌಡ ಅವರು ಸಹ ಒಬ್ಬರಾಗಿದ್ದಾರೆ. ಒಂದು ವೇಳೆ ವಿಜಯ್ ರಾಮೇಗೌಡ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದರೆ, ಮಾಜಿ‌ ಶಾಸಕ ಕೆ.ಬಿ. ಚಂದ್ರಶೇಖರ್ ಅವರ ನಾಯಕತ್ವದಲ್ಲಿ ಚುನಾವಣೆಯನ್ನು ಆರು ಜನ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಪಕ್ಷದ ಅಧೀಕೃತ ಅಭ್ಯರ್ಥಿ ಯನ್ನು ಚುನಾವಣೆಯಲ್ಲಿ ಗೆಲ್ಲಿಸಲು  ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವು ಗಟ್ಟಿಯಾಗಿದೆ ಎಂದು ತೋರಿ ಸೋಣ ಎಂದು ಪ್ರತಿಜ್ಞೆ ಮಾಡಿದರು.

ಕಾರ್ಯಕ್ರಮದ ಕೇಂದ್ರ ಬಿಂದು ಬೂಕನಕೆರೆ ವಿಜಯ್ ರಾಮೇಗೌಡ ಅವರು ಮಾತನಾಡಿ ನೂತನ ವರ್ಷ 2023 ಎಲ್ಲರಿಗೂ ಒಳಿತು ಮಾಡಲಿ. ತಾಲ್ಲೂಕಿನ ಎಲ್ಲಾ ಸಮುದಾಯದ ಮಹಾ ಜನತೆಗೆ 2023ರ ನೂತನ ವರ್ಷದ ಶುಭಾಶಯ ಕೋರಿದರು. ಎಲ್ಲರಿಗೂ ಆರೋಗ್ಯ ಆಯಸ್ಸು ಐಶ್ವರ್ಯ ಸಿಗುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು. ರಾಜಕೀಯಕ್ಕೆ ಬರಲು ನನಗೆ ಆಸಕ್ತಿ ಇರಲಿಲ್ಲ. ಸುಮಾರು 6 ವರ್ಷಗಳ ಹಿಂದೆ ಮಿತ್ರ ಫೌಂಡೇಶನ್ ಪ್ರಾರಂಭ ಮಾಡಿ ಉದ್ಯಮದ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡು ತಮ್ಮ ಕೈಲಾದ ಸಹಾಯ ಮಾಡುತ್ತಾ ಬರು ತ್ತಿದ್ದೇನೆ.ಕರೋನ ಸಂದರ್ಭದಲ್ಲಿ ಮೈಸೂರಿನಲ್ಲಿ ಜನರಿಗೆ ಸಹಾಯ ಹಸ್ತ ಚಾಚುತ್ತಾ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ನಮ್ಮ ತಾಲ್ಲೂಕಿನ ನನ್ನ ಆತ್ಮೀಯರು, ಹಿತೈಷಿಗಳ ಅಭಿಲಾಷೆ ಯಂತೆ ರಾಜಕೀಯ ಧುಮಕಿದ್ದೇನೆ. ರಾಜಕೀಯದಲ್ಲಿ ನನಗೆ ಕ್ಷೇತ್ರದ ಆಶೀರ್ವಾದ, ಸಹಕಾರ ನೀಡಿದರೆ ಒಬ್ಬ ಸಾಮಾನ್ಯ ರೈತನ‌ ಮಗ  ತಾಲೂಕಿನ ಅಭಿವೃದ್ಧಿಗೆ ಏನೆಲ್ಲಾ ಮಾಡಬಹುದೋ ಅದನ್ನು ಮಾಡಿ ತೋರಿಸುತ್ತೇನೆ ಎಂದು ತಂದೆ ತಾಯಿ ಯರನ್ನು ನೆನೆದು ಭಾವುಕರಾಗಿ ನುಡಿದರು.

ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ಮಾಧವಪ್ರಸಾದ್, ಮುಖಂಡರಾದ ರಾಯಪ್ಪ, ಜಿ.ಪಂ.ಮಾಜಿ ಸದಸ್ಯ ಸರ್ವಮಂಗಳ ವೆಂಕಟೇಶ್, ಮುಖಂಡ ಹೆತ್ತುಗೋನಹಳ್ಳಿ ನಾರಾಯಣಗೌಡ, ಗ್ರಾ.ಪಂ.ಮಾಜಿ

ಸದಸ್ಯ ಅಗ್ರಹಾರ ಬಾಚಹಳ್ಳಿ ಕುಮಾರ್,.ಪಂ.ಮಾಜಿ ಅಧ್ಯಕ್ಷ ಶ್ರೀನಿವಾಸ್,ಕುಮಾರ್, ರೈತ ಸಂಘದ ನಾಗರಾಜು,ಸಿದ್ದಿಕ್,ಕೀಳನಕೊಪ್ಪಲು ಸಂತೋಷ್, ವೆಂಕಟರಾಮು ಸೇರಿದಂತೆ ಇತರರು ಇದ್ದರು.


ವರದಿ *ಕಾಮನಹಳ್ಳಿ ಮಂಜುನಾಥ್*

ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು