ವಿಜಯ ಸಂಘರ್ಷ
ಭದ್ರಾವತಿ: ಚಳಿಗಾಲವಾದರೂ ಸಹ ಚುನಾವಣೆ ಕಾವು ಏರತೊಡಗಿದೆ. ಈಗಾಗಲೇ ಸಾಮಾನ್ಯ ಎಲ್ಲಾ ಪಕ್ಷದ ಮುಖಂಡರು ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ
ಮತದಾರರ ಮನ ಮುಟ್ಟಲು ಯತ್ನಿಸುತ್ತಿದ್ದಾರೆ.
ಶುಕ್ರವಾರ ಸಂಜೆ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಶಾರದಾ ಅಪ್ಪಾಜಿ ತಾಲ್ಲೂಕಿನ ತಳ್ಳಿಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಮನೆ ಮನೆಗೆ ಭೇಟಿ ನೀಡಿದರು.
ಇದೆ ಸಂದರ್ಭದಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ.ಅಪ್ಪಾಜಿ ಅವಧಿ ಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ ಮತಯಾಚಿದರು.
ಗ್ರಾಮದಲ್ಲಿ ಪಕ್ಷದ ಮುಖಂಡರು ಶಾರದಾ ಅಪ್ಪಾಜಿ ರವರನ್ನು ಆರತಿ ಬೆಳಗುವ ಮೂಲಕ ಗ್ರಾಮ ಪ್ರವೇಶಕ್ಕೆ ಸ್ವಾಗತಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795