ಕಾಡಾನೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಿ : ಮನವಿ

 ವಿಜಯ ಸಂಘರ್ಷ



ಭದ್ರಾವತಿ : ತಾಲೂಕಿನ ಕಾಡಂಚಿನ ಗ್ರಾಮಗಳಾದ ದೊಡ್ಡೇರಿ, ಬಾಳೇಕಟ್ಟೆ, ಬಿಸಿಲುಮನೆ, ಉಕ್ಕುಂದ ಮತ್ತು ವರವಿನಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿ ನಿವಾಸಿಗಳು ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ರವರಿಗೆ ಮನವಿ ಸಲ್ಲಿಸಿದರು.


    ನಮ್ಮ ಬಳಿ ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದ್ದು, ತೆಂಗು, ಅಡಕೆ, ಭತ್ತ, ರಾಗಿ, ಜೋಳ, ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದು, ಇತ್ತೀಚೆಗೆ ಈ ಗ್ರಾಮ ಗಳ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿ ಸುವುದು ಅಸಾಧ್ಯವಾಗಿದೆ. ಅಲ್ಲದೆ ಕಾಡಾನೆಗಳಿಂದ ಬೆಳೆ ಹಾನಿಯಾಗು ತ್ತಿದ್ದು, ಸಂಕಷ್ಟಕ್ಕೆ ಒಳಗಾಗುವಂತಾ ಗಿದೆ ಎಂದು ಅಳಲು ತೋರ್ಪಡಿಸಿ ಕೊಂಡರು.


ಕೇವಲ ಜಮೀನುಗಳಿಗೆ ಮಾತ್ರವಲ್ಲದೆ ಮನೆಗಳ ಬಳಿ ಸಹ ಕಾಡಾನೆಗಳು ಬರುತ್ತಿದ್ದು, ಇದರಿಂದಾಗಿ ಮನೆ ಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ವಯೋವೃದ್ಧರು, ಮಕ್ಕಳು ಭಯಭೀತ ರಾಗಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಬೆಳೆ ಹಾನಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.


    ಮನವಿ ಸ್ವೀಕರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುಂದಾಗಲಿದೆ ಎಂದು ಭರವಸೆ ನೀಡಿ, ಕಾಡು ಪ್ರಾಣಿಗಳಿಂದ ಉಂಟಾ ದ ಬೆಳೆ ಹಾನಿಗೆ ಇಲಾಖೆ ವತಿಯಿಂದ ಪರಿಹಾರ ಸಹ ನೀಡಲಾಗುತ್ತಿದೆ ಎಂದರು.


    ಸಾಮಾಜಿಕ ಹೋರಾಟಗಾರ, ಉಕ್ಕುಂದ ಗ್ರಾಮದ ಶಿವಕುಮಾರ್, ಬಿ.ಎ ಕುಮಾರ್, ಕಾಶಿ, ಚಂದ್ರಶೇ ಖರ್, ರಘು, ಶಿವಯ್ಯ, ಕೃಷ್ಣಪ್ಪ, ಚಿನ್ನರಾಜು ಮತ್ತು ನಟರಾಜ ಇನ್ನಿತರಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು