ತಹಸೀಲ್ದಾರ್-ಎಎಸ್ ಪಿ ನೇತೃತ್ವದಲ್ಲಿ ಸಂಧಾನ:ಅನಿ ರ್ಧಿಷ್ಟ ಧರಣಿ ಸತ್ಯಾಗ್ರಹ ಅಂತ್ಯ

 ವಿಜಯ ಸಂಘರ್ಷ



 ಭದ್ರಾವತಿ: ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು ಎ.ಸಿ ನ್ಯಾಯಾಲಯ ದ ಆದೇಶ ಕುರಿತು ನಿರ್ಲಕ್ಷ್ಯತನದಿಂದ ವರ್ತಿಸುವ ಜೊತೆಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ದೂರು ದಾರರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಬುಧವಾರ ತಹಸೀಲ್ದಾರ್ ಹಾಗೂ ಉಪವಿಭಾಗದ ಎಎಸ್ ಪಿ ನೇತೃತ್ವ ದಲ್ಲಿ ಸಂಧಾನ ನಡೆದು ಹಿಂಪಡೆ ಯಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್ ಉಪ ವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿ ಕಾರಿಗಳ ಆದೇಶದಂತೆ ಮಲ್ಲಮ್ಮ, ಗಣೇಶಪ್ಪ, ಪಾರ್ವತಮ್ಮ, ಬಾಬು ಭೋವಿ, ಮಂಜಮ್ಮರವರ ಹೆಸರಿಗೆ ಪೌತಿ ಖಾತೆಯ ಆಧಾರದ ಮೇರೆಗೆ ಖಾತೆ ದಾಖಲು ಮಾಡಲು ಅರ್ಹರಾಗಿ ರುತ್ತಾರೆ. ಈ ರೀತಿಯ ಎಲ್ಲಾ ದಾಖಲೆ ಗಳನ್ನು ಗ್ರಾಮಾಂತರ ಪೊಲೀಸ್ ನಿರೀಕ್ಷಕರಿಗೆ ಮಾಹಿತಿ ನೀಡಿದ್ದರು ಇನ್ಸ್ ಪೆಕ್ಟರ್ ಉಡಾಫೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದರು.


ಜಮೀನನಲ್ಲಿನ ಅಡಿಕೆ ಕಟಾವು ಮಾಡಿದ ಸ್ಥಳೀಯ ನಿವಾಸಿಗಳಿಂದ ನೊಂದ ಕುಟುಂಬಕ್ಕೆ ವಾಪಸ್ಸು ಕೊಡಿಸಿ ಹಾಗೂ ಸಮಸ್ಯೆಗೆ ಸ್ಪಂದಿಸದ ಪೊಲೀಸ್ ಅಧಿಕಾರಿಯನ್ನು ಅಮಾನ ತ್ತು ಪಡಿಸುವಂತೆ ಇದೆ ಸಂದರ್ಭದಲ್ಲಿ ಮನವಿ ಮಾಡಿದರು.


ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಪ್ರದೀಪ್, ಎಎಸ್ ಪಿ ಜಿತೇಂದ್ರ ದಯಾಮ, ನಗರ ವೃತ್ತ ನಿರೀಕ್ಷಿಕ ರಾಘವೇಂದ್ರ ಕಾಂಡಿಕೆ ಸೇರಿದಂತೆ ಪ್ರತಿಭಟನೆಗೆ ಸಹಕಾರ ನೀಡಿದ ಪ್ರಮುಖರಿಗೆ ಕೃತಜ್ಞತೆ ಸಲ್ಲಿಸಿದರು.

ಡಿಎಸ್‌ಎಸ್ ಮುಖಂಡರಾದ ಆರ್. ಸುರೇಶ್, ಕುಬೇಂದ್ರಪ್ಪ, ಎಸ್. ಪುಟ್ಟರಾಜು, ವೆಂಕಟೇಶ್ ಹಾಗು ಗಣೇಶಪ್ಪ ಕುಟುಂಬಸ್ಥರು ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು