ವಿಜಯ ಸಂಘರ್ಷ
ಭದ್ರಾವತಿ:ಬಾಬಾ ಸಾಹೇಬ್ ಅಂಬೇ ಡ್ಕರ್ ರವರು ಕೇವಲ ದೇಶಕ್ಕೆ ಮಾತ್ರ ವಲ್ಲದೆ ಇಡೀ ವಿಶ್ವವೇ ಗೌರವಿಸಿ, ಅವರ ಜನ್ಮದಿನವಾದ ಏಪ್ರಿಲ್ 14 ರ ದಿನವನ್ನು ವಿಶ್ವಸಂಸ್ಥೆಯು ಜ್ಞಾನದ ದಿನವನ್ನಾಗಿ ಘೋಷಿಸಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಹೇಳಿದರು.
ಮಂಗಳವಾರ ಹಳೇನಗರದ ಕನಕ ಮಂಟಪ ಮೈದಾನದ ಸಮೀಪದ ಡಾ. ಅಂಬೇಡ್ಕರ್ ಭವನ ಮುಂಭಾಗ ಮಾತನಾಡಿದ ಅವರು,ಡಾ: ಬಿ.ಆರ್. ಅಂಬೇಡ್ಕರ್ ರವರಿಗೆ ಗೌರವ ನೀಡುವ ಸಲುವಾಗಿ, ಅವರ ಹೆಸರಿನಲ್ಲಿ ಬೃಹತ್ ಭವನ ನಿರ್ಮಾಣ ಮಾಡಿ, ಲೋಕಾರ್ಪಣೆ ಮಾಡಲು ತೀರ್ಮಾನಿಸಿ. ಅಂದಿನ ಶಾಸಕ ಎಂ.ಜೆ.ಅಪ್ಪಾಜಿ ರವರು 2017 ರಲ್ಲಿ ಶಂಕು ಸ್ಥಾಪನೆ ಗುದ್ದಲಿ ಪೂಜೆ ನೆರವೇರಿಸಿದ್ದರು.
ಅಂದಿನಿಂದ ಮಾನವ ಹಕ್ಕುಗಳ ಹೋರಾಟ ಸಮಿತಿ ಹೋರಾಟದ ಫಲವಾಗಿ, ಸರ್ಕಾರ ಅಲ್ಪ ಸ್ವಲ್ಪ ಹಣ ಬಿಡುಗಡೆ ಮಾಡಿದೆ. ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಈ ಹಿಂದಿನ ಅಧಿವೇಶನದಲ್ಲಿ ಮುಖ್ಯಮಂತ್ರಿ ಗಳೊಂದಿಗೆ ಮಾತನಾಡಿ,ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿದ್ದರು. ಆದರೆ ಸಿಎಂ ಇನ್ನೂ ಬಾಕಿ ಹಣ ಬಿಡುಗಡೆ ಮಾಡದೆ ಮೀನಾ ಮೇಷವೆಣಿಸು ತ್ತಿರುವುದು ಬಾಬಾ ಸಾಹೇಬರಿಗೆ ಅಗೌರವ ತೋರಿದಂತಾಗಿದೆ ಎಂದು ಕಿಡಿ ಕಾರಿದರು.
ಕೂಡಲೇ ಹಣ ಬಿಡುಗಡೆ ಮಾಡಿ ಪ್ರಧಾನಿಗಳಿಂದ ಲೋಕಾರ್ಪಣೆ ಮಾಡಲು ಮುಂದಾಗಬೇಕು ಎಂದು ಅಗ್ರಹಿಸಿದರು.